ಅಪ್ಪ ಅಪ್ಪಾ ಯೇಸಪ್ಪಾ ನೀನೇ ನನ್ನಾ ಸರ್ವಸ್ವ [2]

ಕನ್ನಡ

ಅಪ್ಪ ಅಪ್ಪಾ ಯೇಸಪ್ಪಾ ನೀನೇ ನನ್ನಾ ಸರ್ವಸ್ವ [2] ನಾನು ನಿನ್ನನ್ನು ಬಿಟ್ಟು ಏನು ಮಾಡಲಾರೆನು [2] 1.ನನ್ನ ನಡೆಯಿಂದಾಗಲಿ ನನ್ನ ನುಡಿಯಿಂದಾಗಲಿ ನಿನ್ನ ನಾಮವೊಂದೆ ಮಹಿಮೆ ಹೊಂದಲೀ [2] ನನ್ನ ಸರ್ವಾಂಗಗಳು ನಿನ್ನ ಸ್ತುತಿ ಮಾಡಲಿ [2] ಅಪ್ಪ ಅಪ್ಪಾ ಯೇಸಪ್ಪಾ ನೀನೇ ನನ್ನಾ ಸರ್ವಸ್ವ [2] ನಾನು ನಿನ್ನನ್ನು ಬಿಟ್ಟು ಏನು ಮಾಡಲಾರೆನು [2] 2.ಸರ್ವ ಸೃಷ್ಟಿಗೆ ನೀನು ಯಜಮಾನನು ಸರ್ವ ಲೋಕವು ನಿನಗೆ ಅಡ್ಡ ಬೀಳಲಿ [2] ಸರ್ವ ಜನರು ನಿನ್ನಲ್ಲಿ ಬಂದು ಸೇರಲಿ [2] ಅಪ್ಪ ಅಪ್ಪಾ ಯೇಸಪ್ಪಾ ನೀನೇ ನನ್ನಾ ಸರ್ವಸ್ವ [2] ನಾನು ನಿನ್ನನ್ನು ಬಿಟ್ಟು ಏನು ಮಾಡಲಾರೆನು [2] 3.ಯೇಸು ನಾನು ನಿಮ್ಮಲ್ಲಿ ನಿಮ್ಮ ವಾಕ್ಯ ನನ್ನಲ್ಲಿ ನಿಮ್ಮ ಪ್ರಾರ್ಥನೆಯಲ್ಲಿ ನನಗೆ ಜಯ ಸಿಗಲಿ [2] ನಾನು ನಿಮ್ಮಲ್ಲಿ ಇದ್ದು ಬಹಳ ಫಲವ ಕೊಡುವೆನು ಅಪ್ಪ ಅಪ್ಪಾ ಯೇಸಪ್ಪಾ ನೀನೇ ನನ್ನಾ ಸರ್ವಸ್ವ [2] ನಾನು ನಿನ್ನನ್ನು ಬಿಟ್ಟು ಏನು ಮಾಡಲಾರೆನು [2]