ಕನ್ನಡ
ಅಪ್ಪಾ ನಿನ್ನ ಪ್ರೀತಿಸುವೆ
ಆಸಕ್ತಿಯಿಂದ ಪ್ರೀತಿಸುವೆ ||
ಎಂದೆಂದು ಸ್ತುತಿಸುವೆ
ನಿನಗಾಗಿಯೇ ತವಕಿಸುವೆ ||
ಎಲ್ಲಾ ನೀನೆ ಅಯ್ಯಾ – ನನಗೆ ||
ಅಪ್ಪಾ ನಿನ್ನ ಪ್ರೀತಿಸುವೆ
ಆಸಕ್ತಿಯಿಂದ ಪ್ರೀತಿಸುವೆ ||
ಬಲಿಯಾಗಿ ರಕ್ಷಿಸಿದೆ
ಪಾಪವನ್ನೆಲ್ಲಾ ನೀಗಿಸಿದೆ ||
ಬೆಳಕಾಗಿ ಬಂದಿರುವೆ – ನನಗೆ ||
ಅಪ್ಪಾ ನಿನ್ನ ಪ್ರೀತಿಸುವೆ
ಆಸಕ್ತಿಯಿಂದ ಪ್ರೀತಿಸುವೆ ||
ನಿನ್ ಪ್ರೀತಿವೊಂದೆ
ಸಾಕು ರಾಜಾ
ಬೇರೇನು ನನಗೆ
ಬೇಡ ದೇವಾ ||
ನನ್ನಾಪ್ತ ನೀನಲ್ಲವೆ – ಇಂದು ||
ಅಪ್ಪಾ ನಿನ್ನ ಪ್ರೀತಿಸುವೆ
ಆಸಕ್ತಿಯಿಂದ ಪ್ರೀತಿಸುವೆ ||
ಅನುದಿನ ಆಹಾರ
ನೀನೆ ಅಯ್ಯಾ
ಬಾಳಿಗೆ ಬೆಳಕು
ನೀನೆ ಅಯ್ಯಾ ||
ಆಶ್ರಯ ನೀನೆ ಅಯ್ಯಾ– ನನ್ನ ||