ಬಿಡುಗಡೆ ನಾಯಕಾ

ಕನ್ನಡ

ಬಿಡುಗಡೆ ನಾಯಕಾ ಜಯವನು ಕೊಡುವನು ನನ್ನಲ್ಲಿ ಇರುವನು ಎಂಥಾ ಆನಂದಾ ಹಲ್ಲೆಲೂಯಾ ಆಮೆನ್ ನಾನು ಹಾಡಿ ಹರ್ಷಿಸುವೆ ಕುಣಿದಾಡಿ ಸ್ತುತಿಸಿ ನಲ್ಲಿವೇ ಎಲ್ಲೆಲ್ಲೂ ಓಡಿ ಸಾರುವೆ ನನ್ನೇಸು ಜೀವಿಸುವ ಬಿಡುಗಡೆ ನಾಯಕಾ ಜಯವನು ಕೊಡುವನು ನನ್ನಲ್ಲಿ ಇರುವನು ಎಂಥಾ ಆನಂದಾ ನನ್ನ ಹುಡುಕಿ ಓಡಿ ಬಂದಾ ಸಂತ್ಯೆಸಿ ಅಪ್ಪಿಕೊಂಡಾ ನನ್ನ ಪಾಪವೆಲ್ಲ ಅಳಿಸಿ ಹೊಸ ಮನುಷ್ಯನಾಗಿಸಿದಾ ಬಿಡುಗಡೆ ನಾಯಕಾ ಜಯವನು ಕೊಡುವನು ನನ್ನಲ್ಲಿ ಇರುವನು ಎಂಥಾ ಆನಂದಾ ಪ್ರೇಮಾಭಿಷೇಕದಿಂದ ನನ್ನ ತುಂಬಿ ದಿನವು ನಡೆಸೀ ಸೈತಾನನನ್ನು ಗೆಲ್ಲಲು ಅಧಿಕಾರವನ್ನು ತಂದಾ ಬಿಡುಗಡೆ ನಾಯಕಾ ಜಯವನು ಕೊಡುವನು ನನ್ನಲ್ಲಿ ಇರುವನು ಎಂಥಾ ಆನಂದಾ ಕೆಂಪು ಸಮುದ್ರ ದಾಟಿ ಹೋಗುವೆ ಯೋರ್ದನತುಳಿದು ನಡೆವೇ ಯೋರಿಕೋವ ಸುತ್ತಿಬರುವೇ ತುತ್ತೂರಿ ಊದಿ ಗೆಲ್ಲುವೇ ಬಿಡುಗಡೆ ನಾಯಕಾ ಜಯವನು ಕೊಡುವನು ನನ್ನಲ್ಲಿ ಇರುವನು ಎಂಥಾ ಆನಂದಾ ಹಲ್ಲೆಲೂಯಾ ಆಮೆನ್