ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ

ಕನ್ನಡ

ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2 1.ಪ್ರೀತಿ ಪ್ರೀತಿ ಎಂದು ಹುಡುಕಲು ನಿಜವಾದ ಪ್ರೀತಿ ಇಲ್ಲ – 2 ನಿನ್ ಪ್ರೀತಿಯೇ ನನಗೆ ಸಾಕಾಯ್ಯಾ ಬೇರೇನೂ ಬೇಡ ಯೇಸಯ್ಯಾ – 2 || ಈ|| ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2 2.ನಾ ನಂಬಿದಾ ನನ್ನವರೂ ನನ್ನ ದಾರಿಗೆ ಮುಳ್ಳಾದರು – 2 ನಾ ಯಾರನ್ನು ನಂಬಲಿ ಯೇಸಯ್ಯಾ ನಿನ್ನ ಬಿಟ್ಟರೆ ನನಗೆ ಯಾರಿಲ್ಲ – 2 || ಈ|| ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2 3.ಈ ಲೋಕದಾ ಜನರೂ ಮುಖ ನೋಡಿ ಪ್ರೀತಿಸುವರು -2 ನನ್ನ ಹೃದಯವಾ ನೋಡಿ ಪ್ರೀತಿಸಿದೆ ನಿನ್ನಂತ ದೇವರು ಯಾರು ಇಲ್ಲ – 2 ಈ ಬಡವಳ ಬಾಳಲ್ಲಿ ಬೆಳಕಾಗಿ ಬಂದೆ ಯೇಸಯ್ಯಾ ಈ ದೀನಳ ಬಾಳನ್ನು ಮೇಲಕ್ಕೆ ಎತ್ತಿದೆ ಅಯ್ಯ – 2