ಕನ್ನಡ
ಕಣ್ಣು ಇದ್ದರು
ನಾನು ಕಾಣಲೇ ಇಲ್ಲಾ
ಕಿವಿ ಇದ್ದರು
ನಾನು ಕೇಳಲೇ ಇಲ್ಲಾ ×2
ಮನಸು ಇದ್ದರು ಗ್ರಹಿಸಲೇ ಇಲ್ಲಾ ×2
ಈ ಲೋಕದಲ್ಲಿ ಬೆಲೆ ಇಲ್ಲದವನಾದೆನು×2
ಹೋಗಬಾರದ ಜಾಗಕ್ಕೆ ಹೋಗಿದ ಕಾಲುಗಳು
ಮಾಡಬಾರದ ಕೆಲಸವನ್ನು ಮಾಡಿದ ಕೈಗಳು ×2
ಆಡಬಾರದ ಮಾತನ್ನು ಮಾತಾಡಿದ ನನ್ನ ಬಾಯಿ ×2
ಈ ಲೋಕದಲ್ಲಿ ನನ್ನ ಜೀವನ ವ್ಯರ್ಥವಾಗಿತ್ತು×2
ಕಣ್ಣು ಇದ್ದರು
ನಾನು ಕಾಣಲೇ ಇಲ್ಲಾ
ಕಿವಿ ಇದ್ದರು
ನಾನು ಕೇಳಲೇ ಇಲ್ಲಾ ×2
ಕತ್ತಲಲ್ಲಿ ನಾ ನಡೆಯುವಾಗ ಬೆಳಕು ಕಾಣಲಿಲ್ಲ
ಮರಣದ ಸಮಯ ಬಂದಾಗ ಜೀವವು ನನಗಿಲ್ಲ ×2
ಕರ್ತನಾದ ಶ್ರೀ ಯೇಸು ನನ್ನನ್ನು ಆರಿಕೊಂಡಾಗ×2
ನಿಜವಾದ ಬೆಳಕು ನಿತ್ಯ ಜೀವವು ನನಗೆ ಸಿಕ್ಕಿತು ×2
ಕಣ್ಣು ಇದ್ದರು
ನಾನು ಕಾಣಲೇ ಇಲ್ಲಾ
ಕಿವಿ ಇದ್ದರು
ನಾನು ಕೇಳಲೇ ಇಲ್ಲಾ ×2
ಕಣ್ಣು ಇರುವಾಗ ನಾನು ಕಾಣಲೇ ಬೇಕು
ಕಿವಿ ಇರುವಾಗ ನಾನು ಕೇಳಲೇ ಬೇಕು ×2
ಮನಸ್ಸು ಇರುವಾಗ ಗ್ರಹಿಸಲೇ ಬೇಕು ×2
ಈ ಜೀವನದಲ್ಲಿ ಕ್ರೀಸ್ತನಿಗಾಗಿ
ಬಾಳಲೇ ಬೇಕು ×2
ಕಣ್ಣು ಇರುವಾಗ......