ಮನಸು ತುಂಬ ನೂರು ಆಸೆ ಯೇಸುವೆ

ಕನ್ನಡ

ಮನಸು ತುಂಬ ನೂರು ಆಸೆ ಯೇಸುವೆ ಹೇಳಿಕೊಳ್ಳಲು ನಿನ್ನ ಬಳಿಗೆ ಬಂದಿರುವೆ (2) ಓ ಯೇಸಯ್ಯಾ ನನ್ನ ಮೇಲೆ ಕರುಣೆ ತೊರೆಯ್ಯಾ ಸತ್ಯವೇದವ ಓದೋ ಆಸೆ, ಯಾವಾಗಲೂ ನಿನ್ನ ಕಾಣುವ ಆಸೆ (2) ಆತ್ಮಕ್ಕೆ ಬಲ ಸಾಲದು ಈ ಆತ್ಮವ ಬಲ ಪಡಿಸಯ್ಯಾ (2) ಮನಸು ತುಂಬ ನೂರು ಆಸೆ ಯೇಸುವೆ ಹೇಳಿಕೊಳ್ಳಲು ನಿನ್ನ ಬಳಿಗೆ ಬಂದಿರುವೆ (2) ಓ ಯೇಸಯ್ಯಾ ನನ್ನ ಮೇಲೆ ಕರುಣೆ ತೊರೆಯ್ಯಾ ಮೊಣಕಾಲೂರಿ ಪ್ರಾರ್ಥಿಸುವಾಸೆ, ಕೈಗಳ ಎತ್ತಿ ಆರಾಧಿಸುವಾಸೆ(2) ಶರೀರವು ಬಲಹೀನವು ಈ ಶರೀರವ ಬಲಪಡಿಸಯ್ಯಾ (2) ಮನಸು ತುಂಬ ನೂರು ಆಸೆ ಯೇಸುವೆ ಹೇಳಿಕೊಳ್ಳಲು ನಿನ್ನ ಬಳಿಗೆ ಬಂದಿರುವೆ (2) ಓ ಯೇಸಯ್ಯಾ ನನ್ನ ಮೇಲೆ ಕರುಣೆ ತೊರೆಯ್ಯಾ ಓಡಿ ಓಡಿ ದುಡಿಯುವ ಆಸೆ, ನಿನ್ನ ಸೇವೆಯ ಮಾಡುವ ಆಸೆ (2) ಪ್ರಾಣಕ್ಕೆ ಬಲ ಸಾಲದು ಈ ಪ್ರಾಣವ ಬಲಪಡಿಸಯ್ಯಾ (2) ಮನಸು ತುಂಬ ನೂರು ಆಸೆ ಯೇಸುವೆ ಹೇಳಿಕೊಳ್ಳಲು ನಿನ್ನ ಬಳಿಗೆ ಬಂದಿರುವೆ (2) ಓ ಯೇಸಯ್ಯಾ ನನ್ನ ಮೇಲೆ ಕರುಣೆ ತೊರೆಯ್ಯಾ