ಬನ್ನಿರಿ ನಮ್ಮ ನಿರ್ಮಾಣಿಕನಿಗೆ ಸಾಷ್ಟಾಂಗವೆರಗೋಣ,

ಕನ್ನಡ

ಬನ್ನಿರಿ ನಮ್ಮ ನಿರ್ಮಾಣಿಕನಿಗೆ ಸಾಷ್ಟಾಂಗವೆರಗೋಣ, ನಮ್ಮ ದೇವಾದಿ ದೇವರನ್ನು ಆರಾಧಿಸೋಣ (೨) ಆತನೇ ನಮ್ಮ ದೇವರು, ನಾವು ಆತನ ಪ್ರಜೆಗಳು (೨), ||ಬನ್ನಿರಿ|| ಕೃತಜ್ಞತಾ ಸ್ತುತಿಯೊಡನೆ ಆತನ ಸನ್ನಿಧಿ ಸೇರೋಣ ಕೀರ್ತನೆಯು ಜಯಘೋಷವು ಆತನಿಗೆ ಮಾಡೋಣ (೨) ||ಬನ್ನಿರಿ|| ರಕ್ಷಕನೆ ಶರಣನೆ ಉತ್ಸಾಹ ಧ್ವನಿಯ ಗೈಯುವೆವು ಯೆಹೋವನೆ ಮಹಾ ದೇವರೇ ಸ್ತೋತ್ರದ ಗೀತೆಯ ಹಾಡುವೆವು ||ಬನ್ನಿರಿ|| ಭೂಮಿಯು ಶಿಖರಗಳು ಎಲ್ಲವೂ ಆತನವೆ ಸಮುದ್ರವು ಒಣ ನೆಲವು ಆತನ ಕೈ ಕೆಲಸವೆ (೨) ||ಬನ್ನಿರಿ||