ಕಾಲವು ಸಾಗರವಾಗಲಿ,

ಕನ್ನಡ

ಕಾಲವು ಸಾಗರವಾಗಲಿ, ನನ್ನಯ ನೆನಪು ಬಂದಲ್ಲಿ ನೀ ನನ್ನ ಬಳಿಗೆ ಬರುವೆಯ? ನೀ ನನ್ನ ಮರೆತೆಯ? ||ಕಾಲವು|| ಕಷ್ಟದ ಕಡಲಲ್ಲಿ ಮುಳುಗಿ ಮಗನೆ, ನನ್ನಿಂದ ನೀ ದೂರ ಹೋದೆಯ?(೨) ಅಭಯವ ನೀಡಲು, ದಾರಿಯ ತೋರಲು, ಹತ್ತಿರಕೆ ನೀ ಬಾರೆಯ? (೨) ||ನೀ ನನ್ನ ಬಳಿಗೆ|| ಲೋಕದ ಕಡಲಲ್ಲಿ ಮುಳುಗಿ ಮಗನೆ, ಆತ್ಮದ ಜ್ಯೋತಿಯ ನೀ ನಂದಿಸಿ (೨) ಮರೆತೆಯ ಮನುಜ ನಿನಗಾಗಿಯೆ, ಶಿಲುಬೇಲಿ ಬಲಿಯಾದೆ ನಾ (೨) ||ನೀ ನನ್ನ ಬಳಿಗೆ||