ಕನಸು ಕಾಣುತ್ತಿದೆ, ಮನಸ್ಸು ಕುಣಿಯುತಿದೆ (೨)

ಕನ್ನಡ

ಕನಸು ಕಾಣುತ್ತಿದೆ, ಮನಸ್ಸು ಕುಣಿಯುತಿದೆ (೨) ಓ ದೇವ ನಿನ್ನನು ನೋಡಲು ನನ್ನ ಮನವು ಕಾಯುತಿದೆ ||ಕನಸು ಕಾಣುತಿದೆ|| ಮುಂಜಾನೆ ಮಂಜಲಿ ನಾ ನಿನ್ನ ನೋಡಿದೆ, ಗಾಳಿಯಂತೆ ನನ್ನೊಳಗೆ ನೀ ಸೇರಿದೆ (೨), ಆ ಕ್ಷಣವೆ ನನ್ನ ಬಾಳು ಹಸಿರಾಯಿತು, ಹೂವಂತೆ ಗಮ ಗಮಿಸಿತು (೨) ||ಕನಸು ಕಾಣುತಿದೆ|| ಕತ್ತಲೆಯ ಬಾಳಿಗೆ ಬೆಳಕಾಗಿ ನೀ ಬಂದೆ, ಈ ಜೀವಕೆ ಹೊಸ ದಾರಿಯ ನೀ ತೋರಿದೆ (೨), ಆ ಕ್ಷಣವೆ ನನ್ನ ಹೃದಯ ಕುಣಿದಾಡಿತು, ನವಿಲಿನಂತೆ ನಲಿದಾಡಿತು (೨) ||ಕನಸು ಕಾಣುತಿದೆ||