ನಾ ಮಾಡಿದ ಪಾಪವೆಲ್ಲಾ,

ಕನ್ನಡ

ನಾ ಮಾಡಿದ ಪಾಪವೆಲ್ಲಾ, ನಾ ಮಾಡಿದ ತಪ್ಪನ್ನೆಲ್ಲಾ, ಮನ್ನಿಸಿ ಯೇಸುವೆ, ಮನ್ನಿಸಿ ಯೇಸುವೆ (೨) ನನ್ನ ಪಾಪವೆಲ್ಲಾ, ನಾ ಒಪ್ಪಿಕೊಳ್ಳುವೆ, ನಿಮ್ಮ ರಕ್ತದಿಂದ ತೊಳೆಯಿರೆನ್ನ ಯೇಸುವೆ, ನಾ ಮಹಾ ಪಾಪಿ ಯೇಸುವೆ, ನೀವೆನ್ನ ಮನ್ನಿಸಿ ಯೇಸುವೆ, ನೀವೆನ್ನ ಮನ್ನಿಸಿ ಯೇಸುವೆ ||ನಾ ಮಾಡಿದ|| ಆಸೆಯ ಅಲೆಗಳಿಗೆ ನಾ ಬಲಿಯಾಗಿ, ರೋಗಿಯಾಗಿ ನಾನಿಂದು ಬಳಲುತ್ತಿರುವೆ ಯೇಸುವೆ, ಸೌಖ್ಯವ ನೀಡೆನಗೆ ಯೇಸುವೆ, ಸೌಖ್ಯವ ನೀಡೆನಗೆ ಯೇಸುವೆ, ||ನಾ ಮಾಡಿದ||