ಪರಲೋಕದಲ್ಲಿ ನನಗೆ ನೀನಲ್ಲದೆ ಯಾರು (೨)

ಕನ್ನಡ

ಪರಲೋಕದಲ್ಲಿ ನನಗೆ ನೀನಲ್ಲದೆ ಯಾರು (೨) ಇಹಲೋಕದಲ್ಲಿ ನೀನಲ್ಲದೆ ಇನ್ಯಾರನ್ನು ಬಯಸೆನು (೨) ಆ ಹಲೆಲೂಯ (೩) 1. ಕಷ್ಟದೊಳು ನನ್ನ ದುಃಖದೊಳು ಯೇಸು ಶಾಂತಿದಾಯಕನೆ (೨) ನಿನ್ನ ನುಡಿಯು ನನ್ನ ಆತ್ಮಕ್ಕೆ ಚೈತನ್ಯಗೊಳಿಸುತ್ತದೆ (೨) ||ಆ ಹಲೆಲೂಯ|| 2. ಶರೀರವು ನನ್ನ ಆತ್ಮದೊಂದಿಗೆ ಹೋರಾಡುತ್ತಿರುವಾಗ (೨) ನಿನ್ನ ಆತ್ಮನು ನನ್ನ ಶೋಧನೆಗೆ ಜಯವನ್ನು ಕೊಡುತ್ತಾನೆ (೨) ||ಆ ಹಲೆಲೂಯ|| ||ಪರಲೋಕದಲ್ಲಿ||