ಯಾರೇ ನಿನ್ನ ಕೈ ಬಿಟ್ಟರೂ ಚಿಂತಿ ಮಾಡಬ್ಯಾಡ (೨)

ಕನ್ನಡ

ಯಾರೇ ನಿನ್ನ ಕೈ ಬಿಟ್ಟರೂ ಚಿಂತಿ ಮಾಡಬ್ಯಾಡ (೨) ಯಾರೇ ನಿನ್ನ ಅಗಲಿದರೂ ಕಣ್ಣೀರ್ ಸುರಿಸಬ್ಯಾಡ (೨) ನನ್ನೇಸು ರಾಜ ಕೈ ಬಿಡನು ಎಂದಿಗೂ ನಿನ್ನ ಮರೆಯನು ||ಯಾರೇ|| ಲೋಕದೊಳಗ ಉನ್ನತರಾದ ಮನುಜರಾರೋ ಓ ಮನಸೇ, ನಿನ್ನ ಹಾಗೆಯೆ ಅವರೂ ಕೂಡ ಪಾಪಿ ತಾನೆ ಹೃದಯವೇ, ನಿನ್ನ ದುಃಖವ ಮನುಜನಿಗ್ಹೇಳಿ ಕಾಲವನ್ನೇಕೆ ನೀ ಕಳೆವೆ (೨) ದೃಷ್ಟಿಸು ಶಿಲುಬೆಯ ದೃಷ್ಟಿಸು ಯೇಸುವೆ ರಕ್ಷಿಸೋ ದೇವರು ||ಯಾರೇ|| ನನ್ನ ದೇವರು ನೆರಳಿನಂತೆ ನಿನ್ನ ಕಾಯ್ತಾನೊ ಕುಸುಮವೆ, ನಿನ್ನ ದುಃಖವ ತಿಳಿದಿರುವ ಅಂಗೈಲಿ ನಿನ್ನ ಚಿತ್ರಿಸಿರುವ, ಅನಾಥನಾಗಿ ನಿನ್ನ ಬಿಡೆನೆಂದು ವಾಗ್ದಾನ ಮಾಡಿರುವಾತನು (೨) ದೃಷ್ಟಿಸು ಶಿಲುಬೆಯ ದೃಷ್ಟಿಸು ಯೇಸುವೆ ಕರುಣೆಯ ದೇವರು ||ಯಾರೇ||