ಯೇಸುವೆ ನಾನು ನಿನ್ನನು ಹುಡುಕಲಿಲ್ಲ ,

ಕನ್ನಡ

ಯೇಸುವೆ ನಾನು ನಿನ್ನನು ಹುಡುಕಲಿಲ್ಲ , ನೀನು ನನ್ನನು ಹುಡುಕಿ ಬಂದೆ (೨), ಈ ಗತಿಸುವ ಲೋಕದ ಬಾಳಿನಲಿ, ನಿನ್ನ ನೆನೆಯದೆ ನಾನು ನಲಿಯುತ್ತಿದ್ದೆ (೨), ನನ್ನ ಮರೆಯದೆ ನೀನು ಹುಡುಕುತ್ತ ಬಂದು, ಹೃದಯದ ಬಾಗಿಲ ತಟ್ಟುತ್ತಲ್ಲಿದ್ದೆ (೨), ||ಯೇಸುವೆ|| ನಾನು ತಾಯಿಯ ಗರ್ಭದಲ್ಲಿ ಇರುವಾಗಲೆ, ನನ್ನ ರೂಪಿಸಿದ ದೇವರು ನೀನಲ್ಲವೇ (೨), ನಿನ್ನ ಅಂಗೈಯಲ್ಲಿ ನನ್ನನ್ನು ಚಿತ್ರಿಸಿರುವೆ, ಆ ಮಮತೆಯ ಮರೆತು ನಾ ಬಾಳಿದೆ (೨), ||ಯೇಸುವೆ|| ಮನ ಮರಗುವ ದೇವರು ನೀನಲ್ಲವೆ, ನಿನ್ನ ಮಮತೆಯ ಹಗ್ಗದಿಂದ ಕಟ್ಟಿರುವೆ (೨), ಬೆಟ್ಟ ಗುಡ್ಡಗಳು ಸ್ಥಳವನ್ನು ಬಿಟ್ಟು ಹೋದರೂ, ನಿನ್ನ ಕೃಪೆಯು ನನ್ನನ್ನು ಬಿಟ್ಟು ಹೋಗದು (೨), ||ಯೇಸುವೆ||