ಅಗ್ನಿ ಬೇಗೆಯನ್ನು ಬೀಸ ಮಾಡು ನೀ

ಕನ್ನಡ

ಅಗ್ನಿ ಬೇಗೆಯನ್ನು ಬೀಸ ಮಾಡು ನೀ ಹಿಂಗಾರಿನ ಮಳೆಯನ್ನು ಸುರಿಯ ಮಾಡು ನೀ 1.ವೃದ್ದರೆಲ್ಲಾ ಸ್ವಪ್ನವನು ನೋಡ ಮಾಡು ನೀ ಯುವಕರು ದರ್ಶನವನು ಕಾಣ ಮಾಡು ನೀ ನಮ್ಮ ಕುಮಾರ್ತೆಗಳ ಚೇತನ ಗೊಳಿಸೀ ಪ್ರವಾದನಾ ನುಡಿಯನು ಹೇಳ ಮಾಡು ನೀ 2.ಆತ್ಮನ ಮಹಿಮೆಯನ್ನು ಸುರಿಯ ಮಾಡು ನೀ ಕಾಡು ಬೆಳವಕ್ಕಿಗಾನ ಕೇಳ ಮಾಡು ನೀ ದೇಶವೆಲ್ಲಾ ಉಜ್ಜೀವನ ಹೊಂದ ಮಾಡು ನೀ 3.ಭಾರತದ ಪ್ರಜೆಗಳೇಲ್ಲಾ ಯೇಸು ಕ್ರಿಸ್ತನ ಕರ್ತಾಧಿ ಕರ್ತನೆಂದು ಆರಧಿಸಲೂ ಕಲ್ವಾರಿ ರಕ್ತದಿಂದ ಶುದ್ದೀಕರಿಸೀ ಈ ವೇಳೆಯೊಳ್ ಈಗಲೇ ಸಂಧಿಸೆಮ್ಮನು