ಕನ್ನಡ
ಅನುರಾಗದ ಸಂಪ್ರೀತಿಯಲ್ಲಿ
ಹಾಡಾಗುವೆ ನನ್ನೇಸುವೆ
ಅನುಭಾವ ಸಾರ ಮನದಾಳದಲ್ಲಿ
ಹೊನಲಾಗಿ ನಾ ಆವರಿಸುವೆ
ಜೀವಭಾವ ಸುಮಧುರ ಸ್ನೇಹ
ನೀನಿರುವೆ ನನ್ನ ಜೀವಾತ್ಮನೇ
ಆರಾಧಿಪೆ ಜಯಘೋಷದಿ
ಸಂತೋಷದ ಸಾನಿಧ್ಯವೇ
ನಾ ಭಜಿಸುವೆ ಸ್ತುತಿಸ್ತೋತ್ರದಿ
ಸಂದೇಶದ ಸಾಕಾರವೇ
ವಿಶ್ವಾಸವೇ ಭವರೂಪವೇ
ಲೋಕದ ಸಿರಿಯೆ ನಿನ ನಾಮವು
ತೇಜಪೂಜಿತ ಗುರುದೇವಾ
ತಿಳಿವ ಮೂಡಿಪ ನೀನಾದ
ಸಮ್ಮುಖದಿ ಬಂದೆ ಸಮರ್ಪಿಸಿ ನಿಂದೆ
ಚಿರಕಾಲ ನಿನ್ನನೇ ನಾ ಪೂಜಿಪೆ
ಮಂದಾರ ಕೋಮಲ ನಿನ ಕರಗಳು
ಹಿತವಾದ ಸತ್ಯ ಸಂಚಾರವು
ಕಣ್ಣಾರೆ ಕಾಣುವ ನಿನ್ನೊಲವ ಕರೆಗೆ
ನವಜ್ಯೋತಿ ನನ್ನ ಆಂತರ್ಯಕೆ
ನಾ ತೊಳೆವೆ ಚರಣವ ನೀಡು
ಪರಲೋಕದಲ್ಲಿ ಸುಮವಾಗಿಸು