ಕನ್ನಡ
ಅಪ್ಪ ಯೇಸಪ್ಪ ನನ್ನ ಅಪ್ಪ ಯೇಸಪ್ಪ
ತಂದೆಯು ನೀವೆನಪ್ಪ ನನ್ನ ತಾಯಿಯು ನೀವೆನಪ್ಪ
1.ಭೂಮಿಯಿಂದ ಮಣ್ಣನು ತೆಗೆದು
ಗೊಂಬೆಯ ಮಾಡಿದೆ ನನ್ನನ್ನು ಗೊಂಬೆಯ ಮಾಡಿದೆ
ನಿಮ್ಮ ಉಸಿರು ಊದಿ ನನಗೆ ಜೀವವ ಕೊಟ್ಟಿರುವೆ ನನಗೆ ಪ್ರಾಣವ ಕೊಟ್ಟಿರುವೆ
ನನ್ನ ಪ್ರಾಣವು ನೀವೇನಪ್ಪ ನನ್ನ ಜೀವವು
ನೀವೇನಪ್ಪ – ಅಪ್ಪ
2.ನನ್ನ ಪಾಪ ಎಲ್ಲವನ್ನು ನೀ ತೊಲಗಿಸಿದೆ ಯೆಸಪ್ಪಾ ನೀ ತೊಲಗಿಸಿದೆ
ನಿನ್ನ ರಕ್ತದಿ ನನ್ನನ್ನು ತೊಳೆದು ಶುದ್ದವ
ಮಾಡಿದಿಯೇ ಯೆಸಪ್ಪಾ
ಶುದ್ದವ ಮಾಡಿದಿಯೇ
ನನ್ನ ನೀತಿಯು ನೀವೇನಪ್ಪ ಪರಿಶುದ್ದನು
ನೀವೇನಪ್ಪ – ಅಪ್ಪ
3.ದಾರಿತಪ್ಪಿದ ನನಗೆ ನೀವು ದಾರಿಯ ತೋರಿಸಿದೆ ನನಗೆ ದಾರಿಯ ತೋರಿಸಿದೆ
ಕತ್ತಲಲ್ಲಿ ಇರುವ ನನಗೆ ಬೆಳಕು ತೋರಿಸಿದೆ ನನಗೆ ಬೆಳಕು ತೋರಿಸಿದ
ನನ್ನ ದಾರಿ ನೀವೇನಪ್ಪ ನನ್ನ ಬೆಳಕು
ನೀವೇನಪ್ಪ – ಅಪ್ಪ