ಅಪ್ಪಾ ತಂದೆಯೇ ಕರುಣಿಸು ಪ್ರೀತಿಯ

ಕನ್ನಡ

ಅಪ್ಪಾ ತಂದೆಯೇ ಕರುಣಿಸು ಪ್ರೀತಿಯ ಆಶಾ ಧೀಪವೇ ಅಭಯ ನೀಡು ನೀ || || ನಿನ್ನ ದಿವ್ಯ ರಾಜ್ಯ ಭೂಮಿಯಲ್ಲಿ ಬರಲಿ ನಿಮ್ಮ ಕೃಪೆ ಎಂದೆಂದು ಇರಲಿ ನಿನ್ನ ಪುಣ್ಯಗೀತೆ ಭೂಮಿಯಲ್ಲಿ ಹಾಡಿ ಸ್ವರ್ಗರಾಜ್ಯ ಭೂಮಿಯಲ್ಲಿ ಬರಲಿ || ಅನುದಿನದ ಆಹಾರ ನಮಗಿಂದು ನೀಡು ದೇವನೆ ಪಿತ ದೇವನೆ || 1.ಸ್ವರ್ಗರಾಜ್ಯ ಸೀಯೋನಲ್ಲಿ ದೇವದೂತರೆಲ್ಲಾರು ಕೀರ್ತೀಸೋ ರಾಜನೇ ಭೂಮಿಯಲ್ಲಿ ಮಾನವರು ಆನಂದದೀ ಒಂದಾಗಿ ಪೂಜಿಸೋ ರಾಜನೇ || 2.ದುಡಿಯುವವರಿಗೂ ಭಾರಹೊತ್ತವರಿಗೂ ಆಶ್ರಯ ನೀನೆ ನಿನ್ನ ನಂಬಿದವರಿಗೆ ನಿತ್ಯ ರಕ್ಷೆ ನೀಡುವಾ ಆನಂದ ನೀನೆ ||