ಆಂತರ್ಯ ಉಕ್ಕುತ್ತಿದೆ ಯೇಸುವೇ

ಕನ್ನಡ

ಆಂತರ್ಯ ಉಕ್ಕುತ್ತಿದೆ ಯೇಸುವೇ ನಿನ್ನ ಆರಾಧನೆ ಮಾಡಲು ನನ್ನ ಪ್ರಾಣ ಪ್ರೀಯಾ ಯೇಸುವೇ ದುಃಖದ ನೋಗವನ್ನು ಮುರಿದು ಹಾಕು ಯೇಸುವೇ ರೋಗದ ನೋಗದಿಂದ ಬಿಡಿಸೆನ್ನ ಯೇಸುವೇ || 2 || ಆರಾಧನೇ ಯೇಸುವೇ || 4 || 1.ಮರುಭೂಮಿ ಯಾತ್ರೆಯಲ್ಲಿ ಹಸಿರಾಗಿ ಬಂದೆ ಯೇಸುವೇ ಕಣ್ಣೀರ ಕಡಲಿನಲ್ಲಿ ಆಶ್ರಯವಾದೆ ಯೇಸುವೇ || 2 || ಬಿರುಗಾಳಿ ಅಲೆಗಳು ಬಂದೆನ್ನ ಬಡಿದರು || 2 || ನಿನ್ನನ್ನು ಬಿಟ್ಟು ಬಾಳಲಾರೆ (ಹೋಗಲಾರೆ) ಯೇಸುವೇ ಆರಾಧನೆ ಯೇಸುವೇ || 4 || || ಆಂತರ್ಯ ಉಕ್ಕುತ್ತಿದೆ || 2.ಕಾರ್ಗತ್ತಲೆ ಕಣಿವೆಯಲ್ಲಿ ಬೆಳಕಾಗಿ ಬಂದೆ ಯೇಸುವೇ ನಿನ್ ದೊಣ್ಣೆ ಕೋಲು ನನಗೆ ಧೈರ್ಯವು ನೀಡಿತು ಯೇಸುವೇ || 2 || ನಿಶ್ಚಯವಾಗಿ ನನ್ನ ಜೀವಮಾನದಲ್ಲಿ ಶುಭವು ಕೃಪೆಯು ಹಿಂಬಾಲಿಸುವುದು (ಜೊತೆಯಾಗಿ ಬರುವುದು) || 2 || ಆರಾಧನೆ ಯೇಸುವೇ || 4 || || ಆಂತರ್ಯ ಉಕ್ಕುತ್ತಿದೆ ||