ಆಗದು ಸಾಧ್ಯವಾಗದು,

ಕನ್ನಡ

ಆಗದು ಸಾಧ್ಯವಾಗದು, ನಿನ್ನ ಅಗಲಿ ಏನು ಮಾಡಲು ಆಗದು ಸಾಧ್ಯವಾಗದು, ಯೇಸಯ್ಯ ಆಗದು ಸಾಧ್ಯವಾಗದು, ||ಆಗದು|| ದ್ರಾಕ್ಷಿ ಗಿಡವೆ ನಿನ್ ಬಳ್ಳಿಯು ನಾ (೨), ನಿನ್ನಲ್ಲಿ ನೆಲಸಿ ನಿನಗಾಗಿ ಹರಡಿ, ಹೇರಳ ಫಲ ಕೊಡುವೆ (೨) ||ಆಗದು|| ಮಣ್ಣೊಂದಿಗೆ ನಾ ಬೆರೆತಿರುವೆ (೨), ನಿನ್ನ ವಾಕ್ಯದಿಂದ ನನ್ನನ್ನು ಈಗಲೆ ಉಜ್ಜೀವಿಸ ಮಾಡಯ್ಯ (೨) ||ಆಗದು|| ಬಲ ನೀಡುವ ಕ್ರಿಸ್ತನಿಂದ (೨), ಎಲ್ಲವ ಮಾಡಲು ಬಲ ಉಂಟು, ಎಲ್ಲವನ್ನು ಮಾಡುವೆನು (೨), ಎಲ್ಲವನ್ನು ಮಾಡುವೆನು, ನಿನ್ ಬಲದಿ, ನಿನ್ ಕರದಿ, ಎಲ್ಲವನ್ನು ಮಾಡುವೆನು, ಯೇಸಯ್ಯ ಎಲ್ಲವನ್ನು ಮಾಡುವೆನು