ಆತ್ಮ ಸ್ವರೂಪ ದೇವಾ, ನನಗೊಂದು ಆಸೆ ರಾಜಾ…

ಕನ್ನಡ

ಆತ್ಮ ಸ್ವರೂಪ ದೇವಾ, ನನಗೊಂದು ಆಸೆ ರಾಜಾ… ಬೇರೇನೂ ಬೇಡ ದೇವಾ, ನೀ ಸಾಕು ನನ್ ಬಾಳಿಗೆ, ನನ್ ಬಾಳಿಗೆ… //2// ನಿನ್ನೆದೆಗೆ ಒರಗುವೆನು ಆತ್ಮನೇ, ನಿನ್ ಮಡಿಲಲಿ ಮಲಗುವೆನು ಆತ್ಮನೇ… ನಿನ್ ಮುಖವ ನೋಡುವೆನು ಆತ್ಮನೇ, ನಿನ್ನನ್ನು ಅಪ್ಪುವೆನು ಆತ್ಮನೇ, ನಿನ್ನನ್ನು ಅಪ್ಪುವೆನು ಆತ್ಮನೇ… //2// ನಿನ್ ಜೊತೆಯಲಿ ನಡೆಯುವೆನು ಆತ್ಮನೇ, ನಿನ್ ಸ್ವರವ ಕೇಳುವೆನು ಆತ್ಮನೇ, ನಿನ್ ಸೇವೆಯ ಮಾಡುವೆನು ಆತ್ಮನೇ, ನಿನ್ ಚಿತ್ತದಿ ನಡೆವೆನು ಆತ್ಮನೇ, ನಿನ್ ಚಿತ್ತದಿ ನಡೆವೆನು ಆತ್ಮನೇ… //2// ನಿನ್ ಸನ್ನಿಧಿ ಸೇರುವೆನು ಆತ್ಮನೇ, ನಿನ್ನನ್ನೇ ಪ್ರಾರ್ಥಿಸುವೆ ಆತ್ಮನೇ, ನಿನ್ ದರ್ಶನ ಪಡೆವೆನು ಆತ್ಮನೇ, ನಿನ್ನಂತೆ ಆಗುವೆನು ಆತ್ಮನೇ, ನಿನ್ನಂತೆ ಆಗುವೆನು ಆತ್ಮನೇ… //2// ಆತ್ಮ ಸ್ವರೂಪ ದೇವಾ, ನನಗೊಂದು ಆಸೆ ರಾಜಾ… ಬೇರೇನೂ ಬೇಡ ದೇವಾ, ನೀ ಸಾಕು ನನ್ ಬಾಳಿಗೆ, ನೀ ಸಾಕು ನನ್ ಬಾಳಿಗೆ… //2//