ಆತ್ಮಪ್ರಿಯನೇ ಅಭಿಷೇಕನೇ

ಕನ್ನಡ

ಆತ್ಮಪ್ರಿಯನೇ ಅಭಿಷೇಕನೇ ನನ್ನನ್ನು ನೀ ಅಭಿಷೇಕಿಸು ನಿನ್ನ ಆತ್ಮವ ನಾ ಹೊಂದುವೆ ಬಾಳುವೆನು ಸಾಕ್ಷಿಯಾಗಿ 1. ಪವಿತ್ರಾತ್ಮನ ಮಳೆಯನ್ನು ನನ್ನ ಮೇಲೆ ಸುರಿಸಯ್ಯಾ ಯೇಸುವಿನ ಮುಖದ ಬೆಳಕನ್ನು ನನ್ನ ಮೇಲೆ ಉದಿಸಯ್ಯಾ 2. ಬಲಹೀನದ ಸಮಯದಲ್ಲಿ ನಿನ್ ಬಲ ನನಗೆ ನೀಡಿರುವೆ ಪವಿತ್ರಾತ್ಮನ ಅಭಿಷೇಕವು ನನ್ನಿಂದ ನೀ ತೆಗೆಯದಿರು 3. ಪೌಲನನ್ನು ಅಭಿಷೇಕಿಸಿ ಆತ್ಮದಲ್ಲಿ ನಡೆಸಿರುವೆ ಸತ್ತವನು ಬದುಕಿದನು ಆತನು ಮಾಡಿದ ಪ್ರಾರ್ಥನೆಯಲ್ಲಿ 4. ಅಗ್ನಿರಥದ ಅಭಿಷೇಕವು ಎಲೀಷನ ಮೇಲೆ ಕಳಿಸಿರಲು ಆ ಅಗ್ನಿಯ ರಥದ ಅಭಿಷೇಕವನ್ನು ಇಂದು ನನಗೆ ದಯಪಾಲಿಸು