ಕನ್ನಡ
ಆಧಾರಾ ಯೇಸಯ್ಯಾ ನನ್ ಜೀವಕಾಲವೆಲ್ಲಾ
ಆಧಾರಾ ಯೇಸಯ್ಯಾ ನನ್ ಉಸಿರಿರುವ ಕಾಲವೆಲ್ಲಾ
ಆಧಾರಾ ಯೇಸಯ್ಯಾ ನನ್ ಬದುಕಿರುವ ಕಾಲವೆಲ್ಲಾ
೧. ಅಳುವಂತಾ ಸಮಯದಲ್ಲಿ, ತಾಯಿಯ ಹಾಗೆ ಬಂದು ಕಣ್ಣೀರ ನೀ ಒರೆಸಿದೆ,
ಅಪ್ಪಾ ತಂದೆಯೆಂದು, ನೋವಿನಿಂದ ಕರೆದಾಗ
ಮಗನೆ ನಾನಿರುವೆ ಎಂದೆ. -೨
ಕುಗ್ಗಿ ಹೋದ ಸಮಯದಲ್ಲಿ, ಬಲಹೀನ ಸಮಯದಲ್ಲಿ ಕೈ ಹಿಡಿದು ಕಾಪಾಡಿರುವೆ
೨. ತಾಯಿಯ ಗರ್ಭದಲ್ಲಿ, ಧರಿಸಿದ ದಿನದಿಂದ ರಕ್ಷಿಸಿ ಕಾಪಾಡಿರುವೆ,
ಜನಿಸಿದ ದಿನದಿಂದ ಇದುವರೆಗು,
ಕಾಯ್ದು ನಡೆಸಿರುವೆ -೨
ನನ್ನನ್ನು ಪ್ರೀತಿಸಿ, ಕನಿಕರ ತೋರಿಸಿ -೨ ನಿನ್ ಪ್ರೇಮದಿ ನಡೆಸಿರುವೆ