ಆರಾಧನೆ ದೇವಾ ಆರಾಧನೆ

ಕನ್ನಡ

ಆರಾಧನೆ ದೇವಾ ಆರಾಧನೆ ಪ್ರಭು ಯೇಸು ಸ್ವಾಮಿಗೆ ಆರಾಧನೆ ಲೋಕದ ಪಾಪಕ್ಕೆ ಪರಿಹಾರ ಬಲಿಯಾದ ದೇವರ ಕುರಿಮರಿಗೆ ಆರಾಧನೆ ಹಲ್ಲೆಲೂಯ ||4|| 1.ಕಣ್ಣೀರ ಕಡಲಲ್ಲಿ ಮುಳುಗುವ ವೇಳೆಯಲ್ಲಿ ಕರಹಿಡಿದ ಕರ್ತನಿಗೆ ಆರಾಧನೆ ಸಂಕಟದ ಸಮಯದಲ್ಲಿ ಜೊತೆಗಿದ್ದು ರಕ್ಷಿಸಿದ ಪರಮೋನ್ನತ ದೇವನಿಗೆ ಆರಾಧನೆ ಹಲ್ಲೆಲೂಯ ||4|| ||ಆರಾಧನೆ|| 2.ಪಾಪದ ಬೇರನ್ನು ನನ್ನಿಂದ ಕಿತ್ತೆಸೆದ ಪಾಪ ವಿಮೋಚಕನೇ ಆರಾಧನೆ ರೋಗದ ವೇದನೆಗೆ ಸೌಖ್ಯವ ನೀಡಿದ ಆರೋಗ್ಯದಾಯಕನೇ ಆರಾಧನೆ ಹಲ್ಲೆಲೂಯ ||4|| ||ಆರಾಧನೆ||