ಆಶೀರ್ವದಿಸುವ ದೇವ

ಕನ್ನಡ

ಆಶೀರ್ವದಿಸುವ ದೇವ ನನ್ನಾಸೆ ಪೂರೈಸುವಾತ || ದರಿದ್ರವ ಅಳಿಸುವ ದೇವ ನನ್ನ ಅಭಿವೃದ್ಧಿ ಪಡಿಸುವ ದೇವ || ಬಲದ ಮೇಲೆ ಬಲವ ಕೃಪೆಯ ಮೇಲೆ ಕೃಪೆಯ ಮಹಿಮೆಯ ಮೇಲೆ ಮಹಿಮೆ ಪರಿಶುದ್ಧ ಪರಿಶುದ್ಧವೇ ನನ್ ಬಾಳಲ್ಲಿ ಪರಿಶುದ್ಧ ಪರಿಶುದ್ಧವೇ || 1.ಸೋಲನ್ನು ಹೊಂದುವ ಸಮಯದಲ್ಲೂ ನಿರಾಶೆಯಾಗುವ ವೇಳೆಯಲ್ಲೂ || ಕೃಪೆಯಿಂದಲೇ ಅಭಿವೃದ್ಧಿಯ ಪಡಿಸುವ ದೇವನು ನಮ್ಮೊಂದಿಗೆ || 2. ಬಾಡಿದ ಜೀವಿತ ಅರಳಿಸುವ ಕೃಪೆಯ ಬುಗ್ಗೆಯು ಹರಿಯುವುದು || ನೂರರಷ್ಟು ಫಲ ಕೊಡುವ ಅಭಿವೃದ್ಧಿ ದೇವನು ನಮ್ಮೊಂದಿಗೆ || 3.ಆತ್ಮಗಳ ಭಾರವು ಹೆಚ್ಚಲಿ ಸೇವೆಯ ಭಾರವು ಹೆಚ್ಚಾಗಲಿ || ಕತ್ತಲೆಯ ಜನರೆಲ್ಲರೂ ಬೆಳಕಿಗೆ ಸೇರುವ ಸಮಯವಿದು ||