ಇಂದು ನನ್ನಕಲತೆ ವಾತ್ಸಲ್ಯದಿಂದ

ಕನ್ನಡ

ಇಂದು ನನ್ನಕಲತೆ ವಾತ್ಸಲ್ಯದಿಂದ ಸಲಹುವ ಉನ್ನತ ಪ್ರೇಮ, ಮಾನಸ ಆಶೆಗಳು ಕತ್ತಲಾಗಿಸಿರಲು, ಮನವ ಪ್ರಕಾಶಿಸಿರುವ ಉನ್ನತ ಪ್ರೇಮ, ||ಇಂದು ನನ್ನ|| ಬಹಳಷ್ಟು ದಿನಗಳು ನಾ ಅಲೆದೆ, ಹುಡುಕಿದೆ ಒಂದಿಷ್ಟು ಪ್ರೀತಿ ಪ್ರೇಮ (೨), ಎಲ್ಲಿಯೂ ಎಂದೂ ಕಾಣಲಿಲ್ಲ ನಾನು ದೇವರದಾದಂತ ಪ್ರೇಮ (೨), ನನ್ನ ದೇವರ ಉನ್ನತ ಪ್ರೇಮ, ||ಇಂದು ನನ್ನ|| ಬಹಳಷ್ಟು ಕಡೆಗೆ ನಾನೋಡಿದೆ, ಹುಡುಕಿದೆ ಸಲಹುವ ದೇವ ಪ್ರೇಮ (೨), ಬೇರೆಲ್ಲೂ ಎಂದೂ ಕಾಣಲಿಲ್ಲ ನಾನು ಇಂದು ಕಂಡಂತ ದೈವ ಪ್ರೇಮ (೨), ನನ್ನ ಯೇಸುವಿನ ದಿವ್ಯ ಪ್ರೇಮ, ||ಇಂದು ನನ್ನ||