ಇನ್ಯಾರು ನಿನ್ನ ಆಪ್ತರು ಕ್ರಿಸ್ತೇಸು ಒಬ್ಬನೆ ಸದಾ

ಕನ್ನಡ

ಇನ್ಯಾರು ನಿನ್ನ ಆಪ್ತರು ಕ್ರಿಸ್ತೇಸು ಒಬ್ಬನೆ ಸದಾ ಸ್ವೀಕರಿಸು ಈ ಆಪ್ತನಾ ಯೇಸು ನನ್ನಾತ್ಮ ರಕ್ಷಕ || 1.ನಿನ್ನಾಪ್ತ ಯೇಸು ಬಂದನು ನಿಂಗಾಗಿ ಜಾತನಾದನು ನಿನ್ನನ್ನು ಕೊಂಡುಕೊಂಡನು ನೀನಲ್ಲ ಶಾಪಗ್ರಸ್ತನು || 2.ಲೋಕ ವಿಹಾರ..ದಾಪ್ತರು ನಿನ್ನಾತ್ಮ ಶಾಂತಿ ನೀಡರು ಹೃದಯವ ತಿಳಿದಾತನು ಆತ್ಮದ ಆಪ್ತ ಕ್ರಿಸ್ತನು || 3.ಮಹಿಮಾ ಸ್ಥಾನ ತ್ಯೆಜಿಸಿ ಪಾಪಿಯ ಸ್ಥಾನ ವಹಿಸಿ ನಮ್ಮೆಲ್ಲ ದ್ರೋಹ ಸಹಿಸಿ ಪ್ರಾಣವ ಕೊಟ್ಟ ಆಪ್ತನೇ || 4.ಪವಿತ್ರ ಐಕ್ಯಕ್ಕಾಗಿಯೇ ಕರೆಯುತ್ತಾನೆ ನಿನ್ನನ್ನು ಸ್ವರ್ಗೀಯ ಕರೆ ಲಾಲಿಸಿ ಆಶ್ರಯಿಸೀ ಆಪ್ತನ ||