ಇಮ್ಮಾನುವೇಲ್ ಇಮ್ಮಾನುವೇಲ್

ಕನ್ನಡ

ಇಮ್ಮಾನುವೇಲ್ ಇಮ್ಮಾನುವೇಲ್ ದೇವರು ನನ್ನೊಂದಿಗೆ ಹಗಲು ಇರುಳು ಕಾಯುವನು ನನ್ನನ್ನು ಎಂದೆಂದೂ ನಡೆಸ್ವನು || 1 ) ಕಣ್ಣಿನ ಮಣಿಯಂತೆ ನನ್ನನ್ನು ಕಾಯುವ ಕರ್ತನು ನಿದ್ರಿಸನು || ಆತನೆ ನನ್ನ ಕೈಯನು ಹಿಡಿದು ಮುಂದೆ ಮುಂದೆ ಸಾಗಿಸುವ || 2 ) ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ಭಯವೇ ಇಲ್ಲ || ಕರ್ತನೆ ನನ್ನ ಹತ್ತಿರವಿದ್ದು ಕೇಡಿನಿಂದ ತಪ್ಪಿಸುವ ||