ಇರುವಾತ ದೇವನೆ ಯುಗಯುಗದಲ್ಲಿ

ಕನ್ನಡ

ಇರುವಾತ ದೇವನೆ ಯುಗಯುಗದಲ್ಲಿ ಇರುವಾತ ನೀನೇ ಪ್ರತಿಕ್ಷಣದಲ್ಲಿ || ಇರುವೇನೆಂಧ್ಹೇಳಿದೆ ಸದಾಕಾಲವು || ಯುಗ ಸಮಾಪ್ತಿವರೆಗೆ – ನನ್ನಯ ಜೊತೆಯಾಗಿ ನೆರಳಾಗಿ || 1.ಮೋಶೆಗೆ ಜೊತೆಯಾಗಿ ಇದ್ದೆ ನೀ ದೇವಾ ಸಮುದ್ರ ಮಧ್ಯದಲ್ಲಿ ಜೊತೆಯಾಗಿ ನಡೆಸಿದೆ || ಅರಣ್ಯ ಯಾತ್ರೆಯಲ್ಲಿ ಅದ್ಭುತವ ತೋರಿಸಿದೆ ಆಕಾಶದಿಂದ ಮನ್ನವ ಸುರಿಸಿದೆ || ಬಂಡೆ ಸೀಳಿ ಜಲವಾ ನೀಡಿ ದಾಹವನು ನೀಗಿಸಿದೆ || ಇರುವಾತ || 2.ಸಿಂಹಗಳ ಗವಿಯಲ್ಲಿ ದಾನಿಯೇಲನೊಂದಿಗೆ ಉರಿಯುತ್ತಿರುವ ಜ್ವಾಲೆಯಲ್ಲಿ ಅಭೇದ್ನೆಗೊರರೊಂದಿಗೆ || ಐಗುಪ್ತ ದೇಶದಲ್ಲಿ ಯೋಸೆಫನೊಂದಿಗೆ ಆಶೀರ್ವದಿಸಿ ಅಧಿಪತಿಯಾಗಿ ಮಾಡಿದೆ || ಶ್ರಮೆಗಳಲ್ಲಿ ನನ್ನ ಜೊತೆಯಾಗಿ ನೀನಿರುವೆ ನನಗಾಗಿ || 3.ಕಣ್ಣೀರ ಕಡಲಲ್ಲಿ ಕಷ್ಟಗಳ ಕಣಿವೆಯಲ್ಲಿ ತೀರಕ್ಕೆ ಸೇರಿಸಿ ನನ್ನನ್ನು ಕಾಯುವೆ || ನನ್ ಹೆತ್ತ ತಂದೆಯಾಗಿ ಕಣ್ಣೀರು ಓರೆಸುವೆ ನಿನ್ನ ಕಣ್ಣ ಗುಡ್ಡೆಯಂತೆ ನನ್ನನ್ನು ಕಾಪಾಡಿದೆ ನೀ ಇಮ್ಮಾನುವೇಲನಾಗಿ ನೀನಿರುವೆ ಜೊತೆಯಾಗಿ ||