ಕನ್ನಡ
ಇಸ್ರಾಯೇಲಿನೇಕ ರಾಜನಾಗಿ ಬಾಳುವ ದೇವ
ಸತ್ಯ ಜೀವ ಮಾರ್ಗ ನೀನು ದೇವ
ಧರೆಯಲ್ಲಿ ಸ್ನೇಹ ದಾಹಕ್ಕಾಗಿ ಜನಿಸಿದ ದೇವ
ನಿತ್ಯಜೀವ ನೀಡುವ ದೇವ
ಕೆಂಗಡಲು ಅಂದು ನಿನ್ನ ಮಾತು ಕೇಳಿದೆ
ಹಸಿದಿಹ ಜನತೆಗೆ ಮನ್ನ ಸುರಿದೆ
ಸುಡು ಬಿಸಿಲಿಗೆ ಬಂದು ನೆರಳಾಗಿ
ಇರುಳಲಿ ಸ್ನೇಹದ ಜ್ವಾಲೆಯಾಗಿ
ಸೀನಾಯಿ ಶಿಖರದ ಮೇಲೆ ನೀ
ಹತ್ತುಪದೇಶವ ಕರುಣಿಸಿದಿ ||ಕೆಂಗಡಲು||
ಮಾನವನಾಗಿ ಅವತರಿಸಿ
ಕಲ್ವಾರಿಯ ಬೆಟ್ಟದಲ್ಲಿ ಬಲಿ ಅರ್ಪಿಸಿ
ರೊಟ್ಟಿಯ ರೂಪದಿ ಅನುದಿನವು
ಇಂದಿಗೂ ಜೀವಂತ ಜೀವಿಸುವ
ಸತ್ಯವೂ ಮಾರ್ಗವೂ ಆದವನೆ,
ನಿನ್ನಯ ನಾಮಕೆ ಜಯಕಾರ ||ಮಾನವನಾಗಿ||