ಈ ಲೋಕ ನೋಡುವ ಆಸೆ ನನಗೆ ಇಲ್ಲಪ್ಪಾ

ಕನ್ನಡ

ಈ ಲೋಕ ನೋಡುವ ಆಸೆ ನನಗೆ ಇಲ್ಲಪ್ಪಾ ನಿನ್ನ ನೋಡುವ ಆಸೆ ಎಷ್ಟೋ ಇದೆಯಪ್ಪ – ಯೇಸಪ್ಪಾ ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ ಹಲ್ಲೇಲುಯ ಸ್ತುತಿಯು ನಿಮಗೆ ಮಹಿಮೆ ನಿಮಗೆ ಘನತೆ ನಿಮಗೆ ಪ್ರಭಾವವು ನಿಮಗೆ ಹಲ್ಲೇಲುಯ ನನ್ನ ಯೇಸಪ್ಪಾ ಸ್ತುತಿಯು ಮಹಿಮೆ ಘನತೆ ನಿಮಗೆ 1.ಇಹಲೋಕದ ಶರೀರ ಆಸೆಯು ನೇತ್ರ ಆಸೆಯು ಬಾಳಿನ ಡಂಬವು ಅಸೂಯೆ ದ್ವೇಷಗಳು ಚಿಂತೆ ಬಾದೆಗಳು – ಈ ಲೋಕ 2.ಪರಲೋಕದಲ್ಲಿ ಹಸಿವು ಬಾಯಾರಿಕೆ ಮರಣವು ವೇದನೆ ದುಃಖವೂ ಇರುವುದಿಲ್ಲ ಶಾಂತಿ ಸಂತೋಷ ನಿತ್ಯವೂ ಇರುವುದಪ್ಪ ನಾ ನಿನ್ನ ಜೊತೆ ಜೀವಿಸುವ ಭಾಗ್ಯವೂ ಸಿಗುವುದಪ್ಪ – ಈ ಲೋಕ