ಈ ಹೃದಯವೆಂಬ ಮನೆಯಲ್ಲಿ ಬಾ ಯೇಸು

ಕನ್ನಡ

ಈ ಹೃದಯವೆಂಬ ಮನೆಯಲ್ಲಿ ಬಾ ಯೇಸು ಇಲ್ಲಿ ಬೆಳಕಿಲ್ಲಾ ನೀ ನಿಲ್ಲದೆ ಈ ಬದುಕಿನ ಹಗಲಲ್ಲಿ ಬಾ ಯೇಸು ಈ ಹಗಲಲ್ಲೂ ಏಕಾಂತವೇ ಹೊತ್ತುಹೋಗದು ನೀ ಬರದೆ ಈ ಬಾಳಲಿ ಕತ್ತಲಾಗದು ಈ ಬದುಕು ನೀನಿದ್ದಲಿ || 1.ನೀನಿರದ ಮನೆಯಲ್ಲಿ ನಾನ್ಯಾರೋ ಈ ಮನೆಯ ಹಂಗೆತಕೊ ಮನೆಯೊಡೆಯ ಮನೆಯೊಳಗೆ ನೀನಿಲ್ಲದೆ ಒಳಗೆಲ್ಲಾ ಹುಸಿಬದುಕು || ಕಣ್ಣಲ್ಲಿ ಮಾತಲ್ಲಿ ನೀ ತುಂಬಿರೋ ಮನದಲ್ಲಿ ದೃಡವಾಗಿರೋ || ಆಕಾರ ನಾನು ಸಾಕಾರ ನೀನು ನನ್ನಲ್ಲಿ ನೀನಾಗಿರೋ || 2.ಅಂತರಂಗವ ನೀ ನೋಡಲು ಮನಸೆಲ್ಲಾ ಬರಿಶೂನ್ಯವು ತುಂಬಿದ ಕಣ್ಣಲ್ಲಿ ನೀ ಕಾಣದೆ ಮಾತೆಲ್ಲಾ ಅನ್ವರ್ಥವು || ನಡೆಯಲ್ಲಿ ನುಡಿಯಲ್ಲಿ ನೀನಿಲ್ಲದೆ ಬಹಿರಂಗ ಚೆಲುವೇತಕೋ || ಸಾಧನ ನಾನು ಸಾಧಕ ನೀನು ಬಂಧನ ಬಲವಾಗಿಸೋ ||