ಉಜ್ಜೀವನ ಮಳೆ ಬೇಕು ನನ್ ಕರ್ತನೆ ||

ಕನ್ನಡ

ಉಜ್ಜೀವನ ಮಳೆ ಬೇಕು ನನ್ ಕರ್ತನೆ || ನಮ್ಮ ಮೇಲೆ ಸುರಿಸಯ್ಯ ಭಾರತವ ನೆನೆಸಯ್ಯ || ಯೇಸುವೆ ಯೇಸುವೇ ನಮ್ಮನು ಅಭಿಷೇಕಿಸು || ಅಗ್ನಿಯುಳ್ಳ ಆತ್ಮನಿಂದ ನಮ್ಮನ್ನು ಅಗ್ನಿಯಾಗಿ ಮಾರ್ಪಡಿಸು || ಉಜ್ಜೀವನ || 1.ಒಣಗಿದ ಎಲುಬೆಲ್ಲ ಕಟಕಟನೆ ಶಬ್ಧವಾಗಿ ಒಂದು ದೊಡ್ಡ ಸೈನ್ಯವಾಗಿ ನಿಲಬಾರದೇ || ಶ್ವಾಸ ತಂದ ಬಿರುಗಾಳಿ ಬೀಸಬಾರದೇ || ಉಜ್ಜೀವನ ದೇಶದಲ್ಲಿ ತರಬಾರದೇ || ಉಜ್ಜೀವನ || 2.ನಿರೀಕ್ಷೆಗೂ ಮೀರಿದ ಭಯಂಕರ ಕೃತ್ಯಗಳ ನಡೆಸಿ ನಮ್ ದೇಶವನ್ನು ನೀ ನಡುಗಿಸು || ಆತ್ಮನೆ ಪ್ರವಾಹದಂತೆ ನೀ ಚಲಿಸಯ್ಯಾ || ಅಂತ್ಯಕಾಲ ಸುಗ್ಗಿಗಾಗಿ ಸಿದ್ಧಮಾಡಯ್ಯಾ || 3.ಮನುಷ್ಯರನ್ನು ಹಿಡಿಯುವ ಬೆಸ್ತರಾಗಿ ಮಾಡಯ್ಯ ಆತ್ಮಗಳ ನೀಡದಿದ್ದರೆ ಪ್ರಾಣವನ್ನು ತೆಗೆದುಕೊಳ್ಳಯ್ಯ ಏನೇ ಬಂದರು ಮುನ್ನುಗ್ಗುವ ಶಕ್ತಿ ನೀಡಯ್ಯಾ ಒಂದೇ ಬಾಳು ನಿನಗಾಗಿಯೆ ಬಾಳಬೇಕಯ್ಯಾ ||