ಕನ್ನಡ
ಉದಯ ನಕ್ಷತ್ರವೇ
ನನ್ನ ಹೃದಯದೀ ಪ್ರಕಾಶಿಸು
ನನ್ನ ಪ್ರಿಯ ಯೇಸುವೇ
ತೋಟಗಾರನಿಗೆ ಶರೋನಿನ ಗುಲಾಬಿ
ಮನೆಕಟ್ಟುವವರಿಗೆ ಮೂಲೆಗಲ್ಲು
ಹಡಗಿನ ನದಿಕನಿಗೆ ಮಾರ್ಗದರ್ಶಿ
ಹಸಿದವರಿಗೆ ಜೀವರೊಟ್ಟಿ
ಶಾಸ್ತ್ರಿಗಳಿಗೆ ಆತ ನಕ್ಷತ್ರವಾದನು
ಪವಿತ್ರ ಸಭೆಗೆ ಆತ ದೀಪಸ್ತಂಭ
ಅಂದರಾರವನ್ನು ಬೆಳಗಿಸುವವನು
ನನ್ನ ಬಾಳಿಗೆ ಯೇಸು ಆತ್ಮದೀಪ
ಬಾಯಾರಿದ ಜಿಂಕೆ ನೀರಿಗೆ ತೋರೆಯಾದ
ಕುರಿಹಿಂಡಿಗೆ ಆತ ಕುರುಬನಾದನು
ಕಾಡಿನ ಮರಗಳಿಗೆ ಸೇಬಿನ ಮರವಾದ
ನನ್ನ ದೇಹಕ್ಕೆ ಜೀವನದಿಯಾದನು