ಕನ್ನಡ
ಉನ್ನತ ದೇವನೆ ನನ್ನೇಸು ರಾಜನೆ,
ನಿನ್ನಯ ಪ್ರೀತಿಯ ಹೃದಯ ಬಯಸಿದೆ (೨),
ರೂಪಾಂತ್ರಗೊಳಿಸಯ್ಯ, ಮಹಿಮೆಯ ಕರ್ತನೆ (೨),
ನಿನ್ ಮುಖಭಾವದಿ ಮಾರ್ಪಡಿಸು ನನ್ನನು (೨),
ಹಗಲೆಲ್ಲ ಇರುಳೆಲ್ಲ, ಹೃದಯ ನಿನಗಾಗಿ ಮಿಡಿಯುತಿದೆ,
ನೆನಪೆಲ್ಲ ಮಾತೆಲ್ಲ, ಪ್ರಿಯನೆ ನಿನ್ನನ್ನೆ ನುಡಿಯುತಿದೆ, ||ಉನ್ನತ ದೇವನೆ||
ಹರುಷದ ಹೊನಲಲಿ ಎಂದೆಂದು ಮುಳುಗುವೆ (೨),
ಸ್ತುತಿಸಿ ನಲಿಯುವೆ, ಪರಿಶುದ್ಧನಾಗುವೆ (೨), ||ಹಗಲೆಲ್ಲ ಇರುಳೆಲ್ಲ||
ನಿನ್ ಪ್ರೀತಿ ಹರಡಲಿ, ಬಳ್ಳಿಯ ಹಾಗೆಯೆ (೨),
ಮಡಿಲಲ್ಲಿ ಮಲಗುವೆ, ಮಗುವಾಗಿ ಕರ್ತನೆ (೨), ||ಹಗಲೆಲ್ಲ