ಉನ್ನತ ದೇವನೆ ಪರಿಶುದ್ಧ ದೇವನೆ

ಕನ್ನಡ

ಉನ್ನತ ದೇವನೆ ಪರಿಶುದ್ಧ ದೇವನೆ ನನ್ನ ಮೊರೆಯ ನೀ ಲಾಲಿಸು ||2| ನಿನ್ನನೆ ಪ್ರಾರ್ಥಿಸುವೆ ಎಡೆಬಿಡದೇ ಕೀರ್ತಿಸುವೆ ನನ್ನ ಸ್ವರವ ನೀ ಆಲಿಸು ||2|| ಪ್ರಾರ್ಥಿಸವೇ ವಿಜ್ಞಾಪಿಸುವೇ ನಮ್ಮ ಭಾರತವ ನೀ ರಕ್ಷಿಸು (ಓ ಯೇಸುವೆ) ಪ್ರಾರ್ಥಿಸುವೆ ವಿಜ್ಞಾಪಿಸುವೇ ನಮ್ಮ ದೇಶವ ನೀ ರಕ್ಷಿಸು. 1.ಸಮಸ್ತ ಭೂಮಿಯು ನಿನ್ನ ಕೈಯಲ್ಲಿದೆ. ನೀನೆ ರಾಜನು ನೀನೆ ಆಳುವಾತನು ||2|| ನನ್ನ ಕಷ್ಟದ ವೇಳೆಯಲ್ಲಿ ಬಿಡಿಸಿ ಕಾದಂತೆ ನನ್ನ ದೇಶವ ಹಾಗೆ ನೀ ರಕ್ಷಿಸು. 2.ರಾಜನ ಹೃದಯವು ನಿನ್ನ ಕೈಯಲ್ಲಿದೆ ನೀರಿನ ಕಾಲುವೆಯಂತೆ ನೀ ಮಾರ್ಪಡಿಸುವೆ ||2|| ವೈರಿಗಳಿಂದ ನನ್ನ ಬಿಡಿಸಿ ಕಾದಂತೆ ನನ್ನ ದೇಶವ ಹಾಗೆ ನೀ ರಕ್ಷಿಸು.