ಕನ್ನಡ
ಉಸಿರಿರುವ ದಿನವೆಲ್ಲ ಯೇಸು ನಿನ್ನ ಸ್ತುತಿಸಿದರು
ನೀ ಮಾಡಿದ ಉಪಕರಕ್ಕೆ ಸರಿಸಾಟಿಯಾಗದು
ನಿನ್ನ ಪ್ರೀತಿಯೆ ಅತಿ ಶ್ರೇಷ್ಠವು
ನಿನ್ನ ಕರುಣೆಯೆ ಅತಿ ದೊಡ್ಡದು
1.ಎಷ್ಟೊಂದು ಉಪಕಾರ ನನ್ನ ಬಾಳಲ್ಲಿ ಮಾಡಿರುವೆ
ಎಲ್ಲವನ್ನು ವರ್ಣಿಸಲು ಈ ಬಾಳು ಸಾಲದು
ನಿನ್ನ ಪ್ರೀತಿಯೆ ಅತಿ ಶ್ರೇಷ್ಠವು
ನಿನ್ನ ಕರುಣೆಯೆ ಅತಿ ದೊಡ್ಡದು
2.ತಾಯಿಯ ಗರ್ಭದಲಿ ನನ್ನನ್ನು ರೂಪಿಸಿದೆ
ಹೆಸರಿಡಿದು ನನನ್ನು ನಿನ್ನ ಸೇವೆಗೆ ಕರೆದೆ
ನಿನ್ನ ಪ್ರೀತಿಯೆ ಅತಿ ಶ್ರೇಷ್ಠವು
ನಿನ್ನ ಕರುಣೆಯೆ ಅತಿ ದೊಡ್ಡದು
3.ಸರ್ವವನ್ನು ಸೃಷ್ಠಿಸಿದ ಸರ್ವಶಕ್ತ ನಾದವನೆ
ಅಪ್ಪ ಎಂದು ಕರೆಯಲು ಅಧಿಕಾರವ ನೀಡಿರುವೆ
ನಿನ್ನ ಪ್ರೀತಿಯೆ ಅತಿ ಶ್ರೇಷ್ಠವು
ನಿನ್ನ ಕರುಣೆಯೆ ಅತಿ ದೊಡ್ಡದು – ಉಸಿರಿರುವ