ಎಂದು ಆನಂದ ನನ್ನೇಸು ನೀಡುವಾ

ಕನ್ನಡ

ಎಂದು ಆನಂದ ನನ್ನೇಸು ನೀಡುವಾ ಸ್ತುತಿಸುವೆ ಸ್ತುತಿಸುವೆ ಸ್ತುತಿಸುತ್ತಲೇ ಇರುವೆ ಹಲ್ಲೆಲೂಯಾ ಆನಂದವೇ [2] 1.ಉನ್ನತನ ಮರೆಯಲಿ ಶಕ್ತನ ನೆರಳಲಿ ಎಂದೂ ಇರುವೆನೂ ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು ಹಲ್ಲೆಲೂಯಾ ಆನಂದವೇ [2] 2.ರೆಕ್ಕೆಯಿಂದ ನನ್ನ ಹೊದಿಸಿ ಕಾದು ನಡೆಸುವಾ ಆತನ ವಚನ ಆತ್ಮನ ಆಯುಧ ನನಗೆ ಖೇಡ್ಯವು ಹಲ್ಲೆಲೂಯಾ ಆನಂದವೇ [2] 3.ಮಾರ್ಗದಲೆಲ್ಲಾ ನನ್ನನು ಕಾಯಲು ದೂತರು ನನಗುಂಟು ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿವರು ಹಲ್ಲೆಲೂಯಾ ಆನಂದವೇ [2] 4.ಸಿಂಹದ ಮೇಲೂ ಸರ್ಪದ ಮೇಲೂ ನಡೆದೇ ಹೋಗುವೆ ವೈರಿಯ ಸಕಲ ಶಕ್ತಿಯ ಜಯಿಸಲು ಅಧಿಕಾರ ನನಗುಂಟು ಹಲ್ಲೆಲೂಯಾ ಆನಂದವೇ [2] 5.ಕಷ್ಟದ ಸಮಯದಿ ಕರೆಯುವ ನನಗೆ ಉತ್ತರ ನೀಡುವಾ ನನ್ನೊಡನಿದ್ದು ಬಿಡುಗಡೆ ಕೊಟ್ಟು ನನ್ನನ್ನು ನಡೆಸುವಾ ಹಲ್ಲೆಲೂಯಾ ಆನಂದವೇ [2]