ಎಲ್ಲಾ ಒಳ್ಳೇದೆ ಆಗುವದು ದೇವ ನಿನ್ನ ಪ್ರೀತಿಸಿದ ನನಗೆ (೨)

ಕನ್ನಡ

ಎಲ್ಲಾ ಒಳ್ಳೇದೆ ಆಗುವದು ದೇವ ನಿನ್ನ ಪ್ರೀತಿಸಿದ ನನಗೆ (೨) ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಮನಸ್ಸು ಊಹಿಸಲಿಲ್ಲ, ನೀ ನನಗಾಗಿಟ್ಟಿದ್ದನ್ನು (೨) ||ಎಲ್ಲಾ ಒಳ್ಳೇದೆ|| ಗಾಡಾಂಧಕಾರದಿ ನಾ ನಡೆದರೂ, ಬೆಂಕಿಯಲ್ಲಿ ಹಾಕಲ್ಪಟ್ಟರೂ (೨) ನೀ ನನ್ನ ಜೋತೆಯೆಂದು ಇರುವೆ ದೇವ, ನಿನ್ನ ವಾಗ್ದಾನ ನನ್ನಲ್ ನೆರವೇರ್ವದು ||ಕಣ್ಣು ಕಾಣಲಿಲ್ಲ|| ಬಂಧು ಮಿತ್ರರು ನನ್ನ ಕೈ ಬಿಟ್ಟರು, ಆತ್ಮೀಯರು ನನ್ನನ್ನು ದೂಷಿಸಿದರು, (೨) ನಿನ್ನ ಕೃಪೆ ನನಗೆ ಸಾಕು ದೇವ, ನಿನ್ನ ವಾಗ್ಧಾನ ನನ್ನಲ್ ನೆರವೇರ್ವದು (೨) ||ಕಣ್ಣು ಕಾಣಲಿಲ್ಲ|||