ಎಲ್ಲಾರ ಪ್ರೀತಿ ತಣ್ಣಗಾಗದರೂ

ಕನ್ನಡ

ಎಲ್ಲಾರ ಪ್ರೀತಿ ತಣ್ಣಗಾಗದರೂ ನೀ ನನ್ನ ಮೇಲೆ ಇಟ್ಟ ಪ್ರೀತಿ ತಣ್ಣಗಾಗಲಿಲ್ಲ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ (2) 1. ಶಿಲುಬೆಯಲ್ಲಿ ತೂಗಲ್ಪಟ್ಟೆ ಹಿಂಸೆ ನೋವು ಸಹಿಸಿಕೊಂಡೆ ವರ್ಣಿಸಲು ಪದಗಳೇ ಇಲ್ಲ ನಿನ್ನ ಬಣ್ಣಿಸಲು ಮಾತೆ ಇಲ್ಲ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ 2. ಚಾಟಿಯಿಂದ ಹೊಡೆಸಿ ಕೊಂಡೆ ಭರ್ಚಿಯಿಂದ ತಿವಿಸಿಕೊಂಡೆ (2) ಹೇಗೆ ನೀನು ಸಹಿಸಿಕೊಂಡೆಯ್ಯಾ ಆನೋವು ಹೇಗೆ ನೀನು ತಾಳಿಕೊಂಡಯ್ಯಾ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ 3. ಕೈಕಾಲುಗಳಿಗೆ ಮೊಳೆ ಹೊಡೆದರು ಪರಿಹಾಸ್ಯ ಮಾಡುತ್ತಾ ಮುಖಕೆ ಉಗಿದರು (2) ಹೇಗೆ ನೀನು ಮೌನವಾದಯ್ಯಾ ಒಂದು ಮಾತನ್ನು ಹೇಳಲಿಲ್ಲಯ್ಯಾ (2) ಯೇಸುವೇ ರಕ್ಷಕ ನಿನ್ನ ಮಮಕಾರ ನನಗೆ ಬೇಕಯ್ಯಾ ಯೇಸಯ್ಯಾ