ಎಷ್ಟೊಂದು ಉಪಕಾರ ಮಾಡಿದಿರಯ್ಯ

ಕನ್ನಡ

ಎಷ್ಟೊಂದು ಉಪಕಾರ ಮಾಡಿದಿರಯ್ಯ ಏನಂತ ಹೇಳಿ ನಾ ಸ್ತುತಿಸಲಿ ಅಯ್ಯಾ (2) ಯೇಸಯ್ಯಾ ಯೇಸಯ್ಯಾ ನಿನ್ನ ಕೃಪೆಗೆ ನಾನು ಪಾತ್ರನಯ್ಯಾ(2) ಕೆಟ್ಟುಹೊದ ನನ್ನನು ನೀನು ಹುಡುಕಿ ಓಡಿ ಬಂದೆ (2) ಪ್ರೀತಿಯ ಹಸ್ತದಲ್ಲಿ ಎದೆಗೆ ಅಪ್ಪಿಕೊಂಡೆ (2) ಕೊಡು ಅಂತ ಹೇಳಿದೆ ನೀನು ಎಲ್ಲವ ಕೊಟ್ಟೆ ನಾನು (2) ತುಂಬಿ ತುಳುಕುವಷ್ಟು ಸುವರವ ಸುರಿದೆ ನೀನು (2) ವೈರಿಗಳ ಮುಂದೆಯೆ ನನಗೆ ಔತಣವ ನೀಡಿರುವೆ (2) ತಲೆಗೆ ತೈಲ ಹಚ್ಚಿ ಅಭಿಷೇಕ ಮಾಡಿರುವೆ (2)