ಕನ್ನಡ
ಎಷ್ಟೊಂದು ಕೃಪೆಯನ್ನು ನೀಡಿರುವೆ ಹೇಗೆ
ನಾ ಸ್ತುತಿಸುವೆನೂ ಇಂದು ಹೇಗೆ ನಾ ಸ್ತುತಿಸುವೆನೂ
ಕರದಲ್ಲಿ ಹಿಡಿದು ಕಣ್ಮಣಿಯಂತೆ ಕಾಲವೆಲ್ಲಾ ಕಾಪಾಡಿದೆ
ದೀನನಾಗಿದ್ದೆ ದಯೆತೊರಿದೆ ನೀ ದೇವನೆ ಸ್ತುತಿಸುವೆನೂ
ಬಲಹೀನನೆಂದು ನನ್ನ ತಳ್ಳದೆ ಬಲನೀಡಿ ಕಾದಿರುವೆ
ಪಾಪದ ಕೆಸರು ಮುಳುಗಿ ನಾ ಹೋದೆ ಮೇಲೆತ್ತಿ ಕಾಪಾಡಿದೆ
ನನಗಾಗಿ ನಿನ್ನ ಜೀವವ ಕೊಟ್ಟೆ ನನಗಾಗಿ ಬರಲಿರುವೆ