ಏ ತಮ್ಮಾ ನಿಲ್ಲಪ್ಪಾ ತಪ್ಪಾಗಿದ್ರೆ ಹೇಳಪ್ಪಾ

ಕನ್ನಡ

ಏ ತಮ್ಮಾ ನಿಲ್ಲಪ್ಪಾ ತಪ್ಪಾಗಿದ್ರೆ ಹೇಳಪ್ಪಾ ಇದ್ದುದ್ದನ್ನೇ ಹೇಳತಿನಿಯಪ್ಪಾ ದೇವರಿಂದ ದೂರಾದೆಯಪ್ಪಾ – ಏ ತಮ್ಮಾ ಕೃಪಾವರಗಳೆಂಬ ಕಿರೀಟ ನಿನ್ ಗಾಗಿ ಇಟ್ಟಾನಲ್ಲೋ ಹುಚ್ಚನಂತೆ ಯಾಕೆ ನೀನ ದೂರಾಗಿ ಹೊಡೆಯಲ್ಲೋ – ಏ ತಮ್ಮಾ ಬಾಳು ಬಂಗಾರವಾಗ್ಲಿ ನನ್ನ ಮಗ ಸುಖದಿಂದ ಇರ್ಲಿ ಚಿಂತಿ ಮಾಡಿ ನಡೆಸುತಾನ ಬಾಳಿನ್ ದೀಪ ಬೆಳಗತಾನ – ಏ ತಮ್ಮಾ ಸೃಷ್ಟಿಯ ರಾಜನಾತ ಕೈ ಮಾಡಿ ಕರೆದಾನಲ್ಲೋ ಅವನ್ಯಾಕ ಬಿಟ್ಟು ನೀನು ದೂರಾಗಿ ಹೊಡೆಯಲ್ಲೋ – ಏ ತಮ್ಮಾ