ಏನೂ ಇಲ್ಲದೆ ಬಂದೆ ದೇವಾ

ಕನ್ನಡ

ಏನೂ ಇಲ್ಲದೆ ಬಂದೆ ದೇವಾ ಏನೂ ಇಲ್ಲದೆ ಗತಿಸಿ ಹೋಗುವೆನು ದೇವರೇ ನಿನ್ನ ನಾಮಕ್ಕೆ ಸ್ತೋತ್ರವು || 2 || 1.ನಾನಂತು ನನ್ನ ವಿಮೋಚಕನು ಜೀವ ಸ್ವರೂಪನೆಂದೂ ಬಲ್ಲೆನು || 2 || ಆತನ ಕಡೆಗೆ ಧೂಳಿನ ಮೇಲೆ ಸಾಕ್ಷಿಯಾಗಿ ನಿಲ್ಲುವೆನು || 2 || || ಏನೂ || 2.ಗಾಯವ ಮಾಡುವನು ಗಾಯವ ಕಟ್ಟುವನು ಆತನ ನಾಮಕ್ಕೆ ಸ್ತೋತ್ರವು || 2 || ಹೊಡೆಯುವಾ ಕೈ ವಾಸಿ ಮಾಡುತ್ತದೆ. ಮನವ ಮರುಗಿ ನನ್ನ ಎತ್ತಿಕೊಂಡನು || 2 || || ಏನೊ || 3.ದೇವರ ಚಿತ್ತಕ್ಕೆ ಒಡಂಬಟ್ಟು ಸಮಾಧಾನವನ್ನು ಹೊಂದು ನೀ || 2 || ಆತನ ಮಾತನ್ನು ಕೇಳಿದರೆ ಅಯುಸ್ಕಾಲ ವೃದ್ಧಿಯಾಗ್ವದು || 2 || || ಏನೂ ||