ಕನ್ನಡ
ಏನೇ ಆದರೂ ನಾ ಹೇಗೆ ಇದ್ದರೂ
ನಿನ್ ಪ್ರೀತಿ ನನ್ನಲ್ಲಿ ಬದಲಾಗದು ಯೆಸಪ್ಪ
ಯಾರೇ ಇದ್ದರೂ ಇಡೀ ಊರೇ ತೊರೆದರೂ
ನಿನ್ ಕೃಪೆಯು ನನ್ನನ್ನು ಕೈಬಿಡದು ಯೆಸಪ್ಪ
ನನ್ನ ಬಿಟ್ಟು ಕೊಡದ ದೇವ
ಪ್ರತಿಕ್ಷಣವೂ ಜೊತೆಯಲ್ಲಿರುವೆ
ನಿನ್ನದೆಲ್ಲ ನನ್ನದೇ , ನನ್ನದೇ ಯೇಸುವೇ,
ನನ್ನ ತಳ್ಳಿ ಬಿಡದ ದೇವಾ
ನಿನ್ನ ಬಿಟ್ಟು ಬಾಳೆನಯ್ಯ
ನನ್ನದೆಲ್ಲಾ ನಿನ್ನದೇ ನಿನ್ನದೇ ಯೇಸುವೇ.
ಹರಿದ ಬಟ್ಟೆಯೊಳಗೂ ಹರಿಯದಂತ ಮಹಿಮೆಯನ್ನಿಡುವೆ
ಎಸೆದ ಜಾಗದಲ್ಲೇ ಜನಾಂಗವನ್ನೆಬ್ಬಿಸುವೆ
ಊಹೆಗೂ ನಿಲುಕದಂತ ಪ್ರೀತಿಯ ನನಗೆ ಕೊಟ್ಟು
ನಿನ್ ಕೃಪೆಯ ಧಾರೆಯೆರೆದು ನನ್ನ ಹೃದಯದಿ ವಾಸಿಸುವೆ
ಕಷ್ಟ ಕಾಲದಲ್ಲೂ ನೀ ನನ್ನನ್ನು ಕೈಬಿಡಲಿಲ್ಲ.
ಮರಣದ ಹಾದಿಯಲ್ಲೂ ನೀ ನನ್ನನ್ನು ಮರೆಯಲಿಲ್ಲ.
ನನ್ ಕೊರತೆಯೆಲ್ಲ ನಿಗಿಸಿ ದಿನದಿನವೂ ಪೋಷಿಸಿರುವೆ
ನಿನ್ ಪ್ರೀತಿ ಕರುಣೆಯಿಂದಲೇ ಇಂದು ಜೀವಂತವಾಗಿರುವೆ
ನನ್ನ ನಂಬಿಕೆಯನ್ನು ನೀ ವ್ಯರ್ಥಗೊಳಿಸೋದಿಲ್ಲ
ನನ್ನ ಜೀವನ ಹೀಗೇ ಇದ್ದಂತೆ ಇರೋದೇ ಇಲ್ಲ
ನಾ ಸುರಿಸಿದ ಪ್ರತಿ ಕಣ್ಣೀರ ನಿಜ ಕಾರಣ ಅರಿತವನೇ,
ನೀ ಹೇಗೂ ಮಾರ್ಗ ಮಾಡುವೇ ಎಂದು ನಿನ್ನನ್ನೇ ನಂಬಿರುವೆ