ಒಂದು ಮಾತು ಹೇಳು ಯೇಸಯ್ಯ

ಕನ್ನಡ

ಒಂದು ಮಾತು ಹೇಳು ಯೇಸಯ್ಯ ನನ್ನ ಮನಸ್ಸಿನ ನೊವು ಮರೆಯುವೆ ಒಂದೇ ಒಂದು ಮಾತು ಸಾಕಯ್ಯ ಈ ಹೃದಯದ ಬಾದೆ ನೀಗಲು ||2|| 1.ನಾ ನಂಬಿದ ನನ್ನವರು ಹಿಂದೊಂದು ಮುಂದೊಂದು ಮಾತಾಡುವರು ||2|| ನೀನಾದರೂ ಮನುಷ್ಯರಂತೆ ಎರಡು ಮಾತಿನವನಲ್ಲ ||2|| ಕರುಣಿಸಯ್ಯ ಕೃಪೆ ತೋರಯ್ಯ ನೊಂದಂತ ಈ ಹೃದಯವ ||2|| 2.ನನ್ನ ಬದುಕಿನಲ್ಲಿ ನನ್ನವರೆ ಚುಚ್ಚು ಮಾತನಾಡಿದರು ||2|| ನಿನಾದರು ಕಣ್ಣೀರು ಒರೆಸಿ ಪ್ರೀತಿಯಿಂದ ಸಂತೈಸಿರುವೆ ||2|| ಸಂತೈಸಿದೆ ಪ್ರೀತಿಸಿದೇ ತಾಯಿಯಂತೆ ಲಾಲಿಸಿದೆ ||2|| 3.ನಾನಂತು ದಿಕ್ಕಿಲ್ಲದವಳು ಧೀನಳೂ ಧೂಳಿಗೆ ಸಮಾನಳು ||2|| ನೀನಾದರು ನನ್ನನ್ನು ಶಿರಸ್ಸನ್ನಾಗಿ ಮಾಡಿರುವೆ ||2|| ನೀನಂತು ಹೆದರದಿರು ಮಗಳೆ ಎಂದು ಧೈರ್ಯವ ಪಡಿಸಿರುವೆ ||2||