ಓ ಕರುಣಾಸಾಗರ ನಿನ್ನ ವಾಕ್ಯ ಮಧುರ

ಕನ್ನಡ

ಓ ಕರುಣಾಸಾಗರ ನಿನ್ನ ವಾಕ್ಯ ಮಧುರ ಅದುವೇ ನನ್ನ ಬಾಳಿಗೆ ಆಧಾರ ಓ ಕರುಣಾಸಾಗರ ನಿನ್ನ ಪ್ರೇಮ ಅಮರ ಅದುವೇ ನನ್ನ ನನ್ನ ಜೀವಕ್ಕೆ ಆಧಾರ ||2|| ಹೆ ಹೆ ಹೆ ಹಲ್ಲೆಲೂಯ ಹಲ್ಲೆಲೂಯ ಆರಾಧನೆ ಓ ಓ ಓ ಹಲ್ಲೆಲೂಯ ಹಲ್ಲೆಲೂಯ ಆರಾಧನೆ 1.ನಿನ್ನಂತೆ ಯಾರಿಲ್ಲ ಈ ಲೋಕದಲ್ಲಿ ಯಜಮಾನನೆ ಅತೀ ಪರಿಶುದ್ಧನೆ ||2|| ನಿನ್ನ ಹಾಗೆ ಯಾರಿಲ್ಲ ಈ ಲೋಕದಲ್ಲಿ ಹತ್ತು ಸಾವಿರದಲ್ಲಿ ಧ್ವಜ ಪ್ರಾಯನು ನೀನೇ ||2|| ಪ ನಿನ್ನ ಯಾರಿಗೆ ಹೋಲಿಸಲಿ ಪ್ರಭುವೆ ||2|| ನೀನೆ ನನ್ನ ಪ್ರಾಣ, ನಿನ್ನ ವಾಕ್ಯವೇ ನನ್ನ ಜೀವನ ನಿನ್ನ ಕೃಪೆಯಿಂದ ನನ್ನ ಬಾಳು ಬಂಗಾರ ಯೇಸಯ್ಯ ||2|| 2.ನನ್ನ ಪ್ರೀತಿಸಲು ಪರಲೋಕ ತ್ಯಜಿಸಿ ಬಂದೆ ನನ್ನ ಪಾಪಕ್ಕಾಗಿ ಶಿಲುಬೆ ಹೊತ್ತು ನಡೆದೆ ||2|| ನನ್ನ ರಕ್ಷಿಸಲು ನಿನ್ನ ರಕ್ತ ಸುರಿಸಿದೆ ನನ್ನ ಸಂತೋಷಕ್ಕಾಗಿ ನಿನ್ನನ್ನೇ ಧಾರೆ ಎರೆದೆ ||2|| ನಿನ್ನ ತಾಳ್ಮೇ ತ್ಯಾಗ ಹೇಗೆ ವರ್ಣೀಸಲಿ ಪ್ರಭು ||2|| ನೀನೆ ನನ್ನ ಪ್ರಾಣ, ನಿನ್ನ ವಾಕ್ಯವೇ ನನ್ನ ಜೀವನ ನಿನ್ನ ಕೃಪೆಯಿಂದ ನನ್ನ ಬಾಳು ಬಂಗಾರ ಯೇಸಯ್ಯ ||2|| 3.ನಿನ್ನ ವಾಕ್ಯವು ಜೇನಿನ ತುಪ್ಪಕ್ಕಿಂತಲೂ ಸಿಹಿ ಅದುವೇ ಈ ಬಾಳಿಗೆ ಸಿಹಿ ಸಂಮೃದ್ಧಿಯಾಗಿದೆ ||2|| ದೇವರೆ ನಿನ ವಾಕ್ಯ ಸಜೀವವಾದದ್ದು ಎಲ್ಲಾ ಇಬ್ಬಾಯಿ ಕತ್ತಿಗಿಂತಲೂ ಹದವಾದದ್ದು ||2|| ನಿನ್ನ ವಾಕ್ಯ ಎಲುಬಿಗೆ ಸಾರ ದೇಹಕ್ಕೆ ಆರೋಗ್ಯ ಪ್ರಭು ||2|| ನೀನೆ ನನ್ನ ಪ್ರಾಣ, ನಿನ್ನ ವಾಕ್ಯವೇ ನನ್ನ ಜೀವನ ನಿನ್ನ ಕೃಪೆಯಿಂದ ನನ್ನ ಬಾಳು ಬಂಗಾರ ಯೇಸಯ್ಯ ||2||