ಕಟ್ಟುಕಥೆಗಳಲ್ಲ ಸತ್ಯದ ವಾರ್ತೆ ಅದುವೇ

ಕನ್ನಡ

ಕಟ್ಟುಕಥೆಗಳಲ್ಲ ಸತ್ಯದ ವಾರ್ತೆ ಅದುವೇ ನನ್ನ ಬಾಳಿಗೆ ಬೆಳಕಾಗಿ ಬಂದಿತು || 2 || ಅದುವೇ ಶಿಲುಬೆಯ ವಾರ್ತೆ ಹೇ…..ಹೇ….. ಅದುವೇ ಪರಲೋಕದ ಶುಭವಾರ್ತೆ || 2 || || ಕಟ್ಟು ಕಥೆ || 1.ಹನೋಕನ ಹಾಗೆ ನಿನ್ನನ್ನೇ ಪ್ರೀತಿಸಿ ಯೋಬನ ಹಾಗೆ ನೀತಿವಂತನಾಗುವೆ || 2 || ನೀನೇ ನನ್ನ ಪ್ರಾಣವು ಯೇಸಯ್ಯಾ ನೀನೇ ನನ್ನ ಜೀವವೂ ಯೇಸಯ್ಯಾ || 2 || || ಕಟ್ಟು ಕಥೆ || 2.ಮೋಶೆಯ ಹಾಗೆ ನಂಬಿಗಸ್ತನಾಗುವೆ ಸ್ಥರಚಿತ್ತದಿಂದ ಶುಭವಾರ್ತೆ ಸಾರುವೆ || 2 || ಇರುವಾತ ದೇವರು ನೀನೇ ಯೇಸಯ್ಯಾ ಬರುವಾತ ದೇವರು ನೀನೇ || 2 || || ಕಟ್ಟು ಕಥೆ || 3.ದಾನಿಯೇಲನ ಹಾಗೆ ಪ್ರಾರ್ಥಿಸುವೆನು ತ್ರಿಕಾಲದಲ್ಲಿಯೂ ಹಂಬಲಿಸುತ್ತಾ || 2 || ನಿನ್ನನ್ನೇ ಮೊರೆಯಿಡುವೆನು ಯೇಸಯ್ಯಾ ನಿನ್ನನ್ನೇ ನೋಡಿ ಕೂಗುವೇ || 2 || || ಕಟ್ಟು ಕಥೆ ||