ಕಣ್ಣೆತ್ತಿ ಪರ್ವತವನ್ನೇ ನೋಡುವೆನೂ

ಕನ್ನಡ

ಕಣ್ಣೆತ್ತಿ ಪರ್ವತವನ್ನೇ ನೋಡುವೆನೂ ಭೂಮಿ ಗಗನ ಮಾಡಿದವನ ನೋಡುವೆನೂ ಕಾಲು ಕದಲದೆ ಕಾಯುವನು ಕರ್ತನು ಎಂದೂ ನಿದ್ರಿಸನೂ ತೂಕಡಿಸಿ ನಿದ್ರಿಸನು ನನ್ನನ್ನು ಕಾಯುವನೂ ಕರ್ತನ ನನ್ನ ಕಾಉವನೂ ನನಗೆ ನೆರಳಾಗಿ ಬರುವನು ಹಗಲಿನಲ್ಲೂ ಇರುಳಿನಲ್ಲೂ ನನ್ನನ್ನು ಕಾಯುವನೂ ಎಲ್ಲಾ ಕೇಡಿಗು ನನ್ನನ್ನು ಕರ್ತನು ಬಿಡಿಸಿ ಕಾಯುವನು ಅನುದಿನವೂ ಕಾಯುವನೂ ನನ್ನ ಆತ್ಮವನೂ ಹೋಗುವಾಗಲೂ ಕಾಯುವನೂ ಬರುತ್ತಿರುವಾಗಲೂ ಕಾಯುವನೂ ಈ ದಿನವೂ ಅನುದಿನವೂ ಎಂದೆಂದು ಕಾಯುವನು