ಕನಸು ಕಾಣುತ್ತಿದೆ ಮನಸ್ಸು ಕುಣಿಯುತಿದೆ ||

ಕನ್ನಡ

ಕನಸು ಕಾಣುತ್ತಿದೆ ಮನಸ್ಸು ಕುಣಿಯುತಿದೆ || ಓ ದೇವ ನಿನ್ನನು ನೋಡಲು ನನ್ನ ಮನವು ಕಾಯುತಿದೆ || ಕನಸು ಕಾಣುತ್ತಿದೆ || ಮುಂಜಾನೆ ಮಂಜಲಿ ನಾ ನಿನ್ನ ನೋಡಿದೆ ಗಾಳಿಯಂತೆ ನನ್ನೊಳಗೆ ನೀ ಸೇರಿದೆ || ಆ ಕ್ಷಣವೆ ನನ್ನ ಬಾಳು ಹಸಿರಾಯಿತು ಹೂವಂತೆ ಗಮಗಮಿಸಿತು || ಕನಸು || ಕತ್ತಲೆಯ ಬಾಳಿಗೆ ಬೆಳಕಾಗಿ ನೀ ಬಂದೆ ಈ ಜೀವಕೆ ಹೊಸ ದಾರಿಯ ನೀ ತೋರಿದೆ || ಆ ಕ್ಷಣವೆ ನನ್ನ ಹೃದಯ ಕುಣಿದಾಡಿತು ನವಿಲಿನಂತೆ ನಲಿದಾಡಿತು || ಕನಸು ||