ಕರ್ತನು ನೇಮಿಸಿದ ಜಯದ ದಿನವಿದು,

ಕನ್ನಡ

ಕರ್ತನು ನೇಮಿಸಿದ ಜಯದ ದಿನವಿದು, ಇಂದು ಆನಂದಿಸುವ, ಹರ್ಷಿಸುವ, ಹಲೆಲೂಯ ಹಾಡುವ (೨), ಹಲೆಲೂಯ ಸೋಲಿಲ್ಲ, ಹಲೆಲೂಯ ಜಯವುಂಟು (೨), ||ಕರ್ತನು ನೇಮಿಸಿದ|| ನನ್ನ ರಕ್ಷಕ ಸರ್ವಶಕ್ತನು, ನನ್ನ ಪಕ್ಷ ಇರುವ (೨), ಲೋಕ ಮನುಷ್ಯರು ನನಗೆ ಎದುರಾಗಿ ಏನೂ ಮಾಡಲಾಗದು (೨), ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ|| ನನ್ನ ಬಲವಾದ, ಕೀರ್ತನೆಯು ಆದ, ನನ್ನ ರಕ್ಷಣೆಯಾದ (೨), ನೀತಿವಂತರ ಗುಡಾರದಿ ಜಯ ಘೋಷ ಮೊಳಗಲಿ (೨), ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ|| ತಳ್ಳಲ್ಪಟ್ಟ ಕಲ್ಲು , ಕಟ್ಟಡ ಕೆಲಸಕ್ಕೆ ಮೂಲೆಗಲ್ಲಾಯಿತು (೨), ಕರ್ತನ ಕಾರ್ಯ ಇದು, ಅತಿಶಯ ಇದು, ಕೈ ತಟ್ಟಿ ನಲಿದಾಡುವ (೨), ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||